ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳಿವೆ

0
filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 39;
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶ್ರಾವಣ ಮಾಸ ಅತ್ಯಂತ ಶ್ರೇಷ್ಠವಾದ ಮಾಸವಾಗಿದ್ದು, ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯ ಅಡಕವಾಗಿದೆ ಎಂದು ಪ್ರಾಚಾರ್ಯ ಎ.ಎಂ. ಅಂಗಡಿ ಹೇಳಿದರು.

Advertisement

ಅವರು ಪಟ್ಟಣದ ಬಾಲಲೀಲ ಮಹಾಂತ ಶಿವಯೋಗಿಗಳ ಗವಿಮಠದಲ್ಲಿ ಶ್ರಾವಣ ಮಾಸದ ಪ್ರವಚನದಲ್ಲಿ ಉಪನ್ಯಾಸ ನೀಡಿ, ವಚನ ಸಾಹಿತ್ಯದ ಮೂಲಕ ಪ್ರಪಂಚಕ್ಕೆ 12ನೇ ಶತಮಾನದ ಶರಣರು ಮಾನವೀಯ ಮೌಲ್ಯಗಳ ಸಾರವನ್ನು ಕೊಟ್ಟಿದ್ದಾರೆ. ಎಲ್ಲರೂ ಸಮಾನತೆ, ಕಾಯಕ ತತ್ವ, ನಿಷ್ಠೆ, ಶ್ರದ್ಧೆಯಿಂದ ಅನುಭವ ಸಾಹಿತ್ಯ ನೀಡಿದವರು. ಇಂತಹ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರವಚನಕಾರ ವೇ.ಮೂ ಪಿ.ಎಸ್. ಮರಿದೇವರಮಠ ಪ್ರವಚನ ನೀಡಿದರು. ಸಂಗೀತ ಸೇವೆಯನ್ನು ವಿಜಯಲಕ್ಷ್ಮೀ ಹಿರೇಮಠ ನಿರ್ವಹಿಸಿದರು. ಶಂಕ್ರಪ್ಪ ಮಡ್ಡಿ, ಮಲ್ಲಪ್ಪ ಬಳ್ಳಾರಿ ಇದ್ದರು.


Spread the love

LEAVE A REPLY

Please enter your comment!
Please enter your name here