ಸಾಮಾನ್ಯವಾಗಿ ಜನರು, ವರ್ಷವಿಡೀ ಎದುರುನೋಡುವ ಕೆಲವು ರೀತಿಯ ಹಣ್ಣುಗಳು ಮತ್ತು ತರಕಾರಿಗಳು ಈ ಚಳಿಗಾಲದಲ್ಲಿ ಹೆಚ್ಚು ಲಭ್ಯವಿವೆ. ಅವುಗಳಲ್ಲಿ ಸಿಹಿಗೆಣಸು, ಹಲಸಿನಕಾಯಿ, ಪ್ಲಮ್, ಸಿಹಿ ಗೆಣಸು ಪ್ರಮುಖವಾಗಿವೆ. ಸಿಹಿ ಗೆಣಸು ಫೈಬರ್ ಮತ್ತು ಪ್ರೊಟೀನ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಪೊಟ್ಯಾಶಿಯಂ, ಕಬ್ಬಿಣದಂತಹ ವಿಟಮಿನ್ ಗಳು ಅನೇಕ ರೋಗಗಳನ್ನು ತಡೆಯುತ್ತದೆ.
ಸಿಹಿ ಗೆಣಸು ಉತ್ತಮ ಡಯಟ್ ಫುಡ್ ಎಂದೇ ಹೇಳಬಹುದು. ಇದಕ್ಕೆ ಹಲವು ಅಂಶಗಳು ಸಾಕ್ಷಿಗಳಾಗುತ್ತವೆ.
ವಿಟಮಿನ್ ಎ, ಸಿ, ಬಿ6, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಪೋಷಕಾಂಶಗಳ ಆಗರವೇ ಸಿಹಿಗೆಣಸು. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಸಿಹಿಗೆಣಸು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಫೈಬರ್ ಭರಿತ ಮತ್ತು ಕಡಿಮೆ ಕ್ಯಾಲೋರಿ ಇರುವ ಸಿಹಿಗೆಣಸು ತೂಕ ಇಳಿಸಲು ಸಹಕಾರಿ. ನಾರಿನಂಶದಿಂದ ಸಮೃದ್ಧವಾಗಿರುವ ಸಿಹಿಗೆಣಸು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಸಿಹಿ ಗೆಣಸು ನಿಯಮಿತ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದೇ ಹೇಳಬಹುದು.
ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಯಿಂದ ಸಮೃದ್ಧವಾಗಿರುವ ಸಿಹಿಗೆಣಸು ಕಣ್ಣಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಮೆದುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.