ಬೆಂಗಳೂರು:- ಬಿಜೆಪಿಯಲ್ಲಿ ವಿಜಯೇಂದ್ರ ಬಿಟ್ರೆ ರಾಜ್ಯಾಧ್ಯಕ್ಷ ಆಗ್ತೀವಿ ಅಂತ ಹೇಳೋ ನಾಯಕರಿಲ್ಲ ಎಂದು ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ವಿಜಯೇಂದ್ರಗೆ ಪರ್ಯಾಯವಾಗಿ ರಾಜ್ಯಾಧ್ಯಕ್ಷ ಆಗ್ತೀವಿ ಅನ್ನೋ ಬೇರೆ ನಾಯಕರು ಇಲ್ಲ. ಎರಡೇ ವರ್ಷಕ್ಕೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ರೆ ಅವಕಾಶ ಕಿತ್ತುಕೊಂಡಂತೆ ಆಗಲಿದೆ. ಹಾಗಾಗಿ ಇದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಬೇಕು.
ವಿಜಯೇಂದ್ರಗೆ ಎರಡು ವರ್ಷದ ಅವಕಾಶ ಕೊಟ್ಟಿದ್ದಾರೆ. ಇನ್ನೂ ಒಂದು ವರ್ಷ ಅವಕಾಶ ಕೊಟ್ಟರೆ ಪೂರ್ಣ ಅವಕಾಶ ಕೊಟ್ಟಂತಾಗಲಿದೆ. ಯಾವುದೇ ಅಧ್ಯಕ್ಷರಿಗೆ ಮೂರು ವರ್ಷ ಅವಕಾಶ ಕೊಡಬೇಕು. ಯಾರಿಗೇ ಆಗಲೀ ಪೂರ್ಣ ಅವಕಾಶ ಕೊಟ್ಟು ನೋಡಬೇಕು ಎಂದು ವಿಜಯೇಂದ್ರರನ್ನು ಇನ್ನೂ ಒಂದು ವರ್ಷ ಮುಂದುವರೆಸಬೇಕು ಎಂದು ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದ್ದಾರೆ.
ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಎರಡು ವರ್ಷ ಪೂರೈಸಿದ್ದಾರೆ. ಅವರು ಎರಡು ವರ್ಷ ಮುಗಿಸಿದ್ದು ಗೊತ್ತೇ ಆಗಲಿಲ್ಲ. ಬಹಳ ಚಿಕ್ಕ ವಯಸ್ಸಿಗೆ ಪಕ್ಷ ಅವರಿಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ವಿಪಕ್ಷ ನಾಯಕರ ಜತೆ ಸೇರಿಕೊಂಡು ವಿಜಯೇಂದ್ರ ಅವರು ಅನೇಕ ಹೋರಾಟ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.


