ಬೆಂಗಳೂರು:- ಮುನಿರತ್ನ ಅವರ ಇನ್ನೂ ಎರಡು ಆಡಿಯೋ ಇವೆ, ನಾಳೆ ರಿಲೀಸ್ ಮಾಡ್ತೇನೆ ಎಂದು ಚಲುವರಾಜು ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಕಾಂಟ್ರ್ಯಾಕ್ಟರ್ ಹಾಗೂ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಮುನಿರತ್ನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋ ಇವೆ. ನಾಳೆ ರಿಲೀಸ್ ಮಾಡುತ್ತೇನೆ ಎಂದರು.
ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಜತೆ ಮಾತಾಡಿದ ಆಡಿಯೋ ಹಾಗೂ 30% ಕಮಿಷನ್ ವಿಚಾರದ ಆಡಿಯೋ ಬಿಡುಗಡೆ ಮಾಡುತ್ತೇನೆ. ನಾಳೆ 2 ಆಡಿಯೋ ರಿಲೀಸ್ ಮಾಡುತ್ತೇನೆ ಎಂದಿದ್ದಾರೆ.
ಅವರು ಗಲಾಟೆ ಸೃಷ್ಟಿಸಿ ವೇಲು ನಾಯಕ್ ಮೇಲೆ ಆರೋಪ ಹೊರಿಸಲು ಹನುಮಂತನರಾಯಪ್ಪ ಮೂಲಕ ವಿಷಯಾಂತರಕ್ಕೆ ಕುತಂತ್ರ ಮಾಡಲಾಗಿದೆ ಎಂದು ಚಲುವರಾಜು ಆರೋಪಿಸಿದ್ದಾರೆ. ಬೆಳಗ್ಗೆ ನನ್ನನ್ನು ಕರೆದು ನ್ಯಾಯ ಕೊಡಿಸುತ್ತೇನೆ ಅಂದರು. ಬಳಿಕ ಹಣಕ್ಕೆ ಬೇಡಿಕೆ ಇಟ್ಟರು. ಇದಕ್ಕೆ ನಾನು ಈಗಾಗಲೇ ಉತ್ತರವನ್ನು ಕೊಟ್ಟಿದ್ದೇನೆ ಎಂದಿದ್ದಾರೆ.