ಬೆಂಗಳೂರು: ಸ್ಮಾರ್ಟ್ ಮೀಟರ್ʼಗಳ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ ಎಂದು ಶಾಸಕ ಅಶ್ವಥ್ ನಾರಾಯಣ್ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಮೀಟರ್‌ಗಳ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ನಾನು, ವಿಶ್ವನಾಥ್ ಇಬ್ಬರು ಸದನದಲ್ಲೂ ಇದರ ಬಗ್ಗೆ ಮಾತಾಡಿದ್ದೇವೆ.
Advertisement
ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರ ಅವ್ಯವಹಾರ ನಡೆಸಿದೆ. ನಮ್ಮ ಆರೋಪಕ್ಕೆ ಸದನದಲ್ಲೇ ಉತ್ತರ ಕೊಡುತ್ತೇನೆ ಎಂದು ಇಂಧನ ಸಚಿವರು ಹೇಳಿದ್ದರು. ಆದರೆ, ಸದನಕ್ಕೆ ಆ ದಿನ ಬಂದಿದ್ದರೂ ಕೂಡ ಸಚಿವ ಜಾರ್ಜ್ ನಾಪತ್ತೆಯಾಗಿದ್ದರು.
ನಮ್ಮ ಆರೋಪಗಳಿಗೆ ಸಚಿವರು ಉತ್ತರ ಕೊಡಲಿಲ್ಲ. ಆದರೆ ಸೋಮವಾರ ಅಧಿಕಾರಿಗಳ ಮೂಲಕ ಹಗರಣ ಆಗಿಲ್ಲ ಎಂದು ಸರ್ಕಾರ ಹೇಳಿಸಿದೆ ಎಂದು ತಿಳಿಸಿದರು.