ನಿಮಗೆ ಕಾಡುವ ಎದೆಯುರಿ ಸಮಸ್ಯೆಗೆ ಮನೆಯಲ್ಲಿಯೇ ಇದೆ ಪರಿಹಾರ!

0
Spread the love

ಇತ್ತೀಚೆಗೆ ಹಲವಾರು ಮಂದಿ ಎದೆಯುರಿ, ವಾಕರಿಕೆ ಮತ್ತು ವಾಂತಿ ಸಮಸ್ಯೆಗಳಿಂದ ಬಳಳುತ್ತಿದ್ದಾರೆ. ಅಲ್ಲದೇ ಈ ಸಮಸ್ಯೆಗಳು ಕೂಡ ಸರ್ವೇ ಸಾಮಾನ್ಯವಾಗಿ ಹೋಗಿದೆ. ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲವು ಅನ್ನನಾಳದ ಮೂಲಕ ಹೊರಬಂದಾಗ, ಇದು ನಮ್ಮ ಗಂಟಲು ಮತ್ತು ಎದೆಯ ಪ್ರದೇಶಗಳಲ್ಲಿ ಒಂದು ರೀತಿ ಕಿರಿಕಿರಿಯನ್ನು ಉಂಟುಮಾಡುತ್ತದೆ.

Advertisement

ಇದು ಅಜೀರ್ಣ ಮತ್ತು ಅಸಿಡಿಟಿಯಿಂದ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕೆಲವೊಮ್ಮೆ ನಾವು ಹೆಚ್ಚು ಆಹಾರವನ್ನು ಸೇವಿಸಿದಾಗ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರವನ್ನು ತೆಗೆದುಕೊಂಡಾಗ, ಹೆಚ್ಚಾಗಿ ಎದೆಯುರಿ ಉಂಟಾಗುತ್ತದೆ. ಹಾಗಾಗಿ ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅನೇಕರು ಸೇವಿಸುತ್ತಾರೆ. ಆದರೆ ಮಾತ್ರೆಗಳಿಂದಲೇ ಶಾಶ್ವತವಾಗಿ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ.

ಚೂಯಿಂಗ್ ಗಮ್: ನೀವು ಎದೆಯಲ್ಲಿ ತೀವ್ರವಾದ ಉರಿ ಹೊಂದಿದ್ದರೆ, ಪುದೀನ ಸುವಾಸನೆಯ ಚೂಯಿಂಗ್ ಗಮ್ ಅನ್ನು ಅಗಿಯಿರಿ.

ಬಾದಾಮಿ ಒಂದು ಹಿಡಿ ಬಾದಾಮಿ ಕೂಡ ನಿಮ್ಮ ಎದೆಯುರಿ ಸಮಸ್ಯೆಯನ್ನು ತಕ್ಷಣವೇ ಗುಣಪಡಿಸುತ್ತದೆ.

ಅಲೋವೆರಾ ಅಲೋವೆರಾ ಕೂಡ ನಿಮ್ಮ ಎದೆಯ ಕಿರಿಕಿರಿಯನ್ನು ತಕ್ಷಣವೇ ಗುಣಪಡಿಸುತ್ತದೆ. ಇದು ನೈಸರ್ಗಿಕ ಮೂಲಿಕೆ. ಇದು ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ. ಎದೆಯುರಿ ಸಮಸ್ಯೆ ಇದ್ದರೆ ನೀವು ಅಲೋವೆರಾವನ್ನು ಬಳಸಬಹುದು.

ಸೇಬು ಪ್ರತಿನಿತ್ಯ ಸೇಬನ್ನು ತಿಂದರೆ ಹೊಟ್ಟೆಯಲ್ಲಿರುವ ಎಲ್ಲಾ ಆಮ್ಲಗಳು ತಕ್ಷಣವೇ ಗುಣವಾಗುತ್ತವೆ. ಏಕೆಂದರೆ ಆಮ್ಲವು ಎದೆಯುರಿ ಉಂಟುಮಾಡುತ್ತದೆ.

ಶುಂಠಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಶುಂಠಿಯ ತುಂಡನ್ನು ಜಗಿಯುವುದು ಅಥವಾ ಶುಂಠಿ ಚಹಾವನ್ನು ಕುಡಿಯುವುದು ಸಹ ಎದೆಯುರಿಯಲ್ಲಿ ಪರಿಹಾರವನ್ನು ನೀಡುತ್ತದೆ.

 


Spread the love

LEAVE A REPLY

Please enter your comment!
Please enter your name here