ಬೆಂಗಳೂರು: ಅಸೆಂಬ್ಲಿವಾರು ಜಾತಿಗಣತಿ ಕುರಿತು ಸಿಡಿ ಕೊಡುವ ಸಾಧ್ಯತೆ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಜಾತಿಗಣತಿ ವರದಿಗೆ ಮೇಲ್ವರ್ಗಗಳ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು, ನನಗೆ ಇರೋ ಮಾಹಿತಿ ಪ್ರಕಾರ ಜಾತಿಗಣತಿ ವರದಿ ಬಗ್ಗೆ ಸಿಡಿ ಕೊಡುತ್ತಾರೆ ಎಂಬ ಮಾಹಿತಿ ಇದೆ.
ವಿಧಾನಸಭೆವಾರು ಸಿಡಿ ಕೊಡುವ ಸಾಧ್ಯತೆ ಇದೆ. ಸಿಡಿಯನ್ನು ನಿಮ್ಮ ಕೈಗೆ ಕೊಟ್ಟಾಗ ನಿಮ್ಮ ತಾಲೂಕಿನಲ್ಲಿ, ಸಮುದಾಯಗಳು ಕಡಿಮೆ ಜಾಸ್ತಿ ಇದ್ದರೆ ಅಲ್ಲಿ ನ್ಯಾಯ ಕೊಡಲು ಅವಕಾಶ ಇದೆ. ವರದಿಯೇ ಜಾರಿ ಆಗಿಲ್ಲ. ಯಾರೇ ಸರ್ವೆ ಮಾಡಿದರೂ ಇಂತಹ ಅಸಮಾಧಾನ ಬರುತ್ತದೆ. ವರದಿ ನೋಡದೇ ವಿರೋಧ ಮಾಡೋದು ಬೇಡ ಎಂದರು.
ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ 40 ಲಕ್ಷ ವೋಟ್ ವ್ಯತ್ಯಾಸ ಬರುತ್ತದೆ. ವ್ಯತ್ಯಾಸ ಕಂಡುಹಿಡಿಯಬೇಕಾದರೆ ಸಮರ್ಪಕವಾಗಿ ಚರ್ಚೆ ಆಗಬೇಕು. ಆದರೆ ನೆಗೆಟಿವ್ ಚರ್ಚೆ ಆಗಬಾರದು. ಮೊದಲೇ ಅಪಸ್ವರ ಎತ್ತೋದು ಸರಿಯಲ್ಲ. ವರದಿ ಮೊದಲು ಚರ್ಚೆ ಆಗಲಿ. ಅಮೇಲೆ ನೋಡೋಣ. ಮೊದಲೇ ವಿರೋಧ ಬೇಡ ಎಂದು ಮನವಿ ಮಾಡಿದರು.