ಬೆಂಗಳೂರು: ಜಾತಿಗಣತಿ ವಿಚಾರಕ್ಕೆ ಸದ್ಯ ಯಾವುದೇ ಗೊಂದಲಗಳಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಾತಿಗಣತಿ ವಿಚಾರಕ್ಕೆ ಸದ್ಯ ಯಾವುದೇ ಗೊಂದಲಗಳಿಲ್ಲ. ಎಕ್ಸ್ಟ್ರಾ ಜಾತಿ ಸೇರಿಸಿದ್ದು ಗೊಂದಲವಾಗಿತ್ತು.
Advertisement
ಸ್ಕೆಡ್ಯುಲ್ ಲಿಸ್ಟಲ್ಲಿ ಇರುವ ಜಾತಿಗಳನ್ನ ಮಾತ್ರ ಬರೆಸಬೇಕು ಎಂದು ಹೇಳಿದ್ದಾರೆ. ಕ್ರಿಶ್ಚಿಯನ್ ಅಥವಾ ಬೇರೆ ಧರ್ಮಕ್ಕೆ ಮತಾಂತರವಾದ್ರೆ ಮುಗೀತು. ಆ ಧರ್ಮವನ್ನಷ್ಟೇ ಗಣತಿಯಲ್ಲಿ ಬರೆಸಬೇಕು. ಕ್ರಿಶ್ಚಿಯನ್ ಜೊತೆಗೆ ಜಾತಿ ಸೇರಿಸುವಂತಿಲ್ಲ. ಸೆ.22 ಕ್ಕೆ ಜಾತಿಗಣತಿ ಶುರುವಾಗುತ್ತೆ. ಜಾತಿಗಣತಿ ಮುಂದೂಡಿಕೆಯಾಗಲ್ಲ ಎಂದು ಹೇಳಿದ್ದಾರೆ.