ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುಂಡಾಟ ಮುಂದುವರಿದಿದೆ.
ಕಳೆದ ಜನವರಿ 7ರಂದು ಮಧ್ಯಾಹ್ನ ಸಹಾಯಕ ಜೈಲರ್ ಮೇಲೆ ಸಜಾಬಂಧಿಗಳಾದ ಆನಂದ್ ಹಾಗೂ ಅಬ್ದುಲ್ ಘನಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಜಾಬಂಧಿ ಕಚೇರಿಗೆ ಅನಧಿಕೃತವಾಗಿ ಪ್ರವೇಶಿಸಲು ಯತ್ನಿಸಿದ ಕೈದಿಗಳನ್ನು ತಡೆಯಲು ಮುಂದಾದ ಅಸಿಸ್ಟೆಂಟ್ ಜೈಲರ್ ಹಾಗೂ ಸಿಬ್ಬಂದಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ಘಟನೆ ಬಳಿಕ ಜೈಲಿನಲ್ಲಿ ಕರ್ತವ್ಯ ನಿರ್ವಹಣೆಗೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರಭಾರ ಅಧೀಕ್ಷಕರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಜೈಲಿನೊಳಗಿನ ಐಷಾರಾಮಿ ಜೀವನ, ಮದ್ಯ ಸೇವನೆ ಹಾಗೂ ಹುಟ್ಟುಹಬ್ಬ ಆಚರಣೆ ವಿಡಿಯೋಗಳು ವೈರಲ್ ಆಗಿ ಅಧಿಕಾರಿಗಳ ಅಮಾನತಿಗೆ ಕಾರಣವಾಗಿದ್ದರೂ, ಹೊಸ ಡಿಜಿಪಿ ಅಲೋಕ್ ಕುಮಾರ್ ಅವರ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಜೈಲಿನ ಅಕ್ರಮಗಳು ನಿಲ್ಲದಿರುವುದು ಮತ್ತೊಮ್ಮೆ ಬಹಿರಂಗವಾಗಿದೆ.



