ರಾಯಚೂರು:- ಗ್ಯಾರಂಟಿ ಹೆಸರೇಳಿಕೊಂಡು ಕಾಂಗ್ರೆಸ್ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಒಂದೆಡೆ ಅನುದಾನ ಸಿಗುತ್ತಿಲ್ಲ ಎಂದು ಸ್ವಪಕ್ಷದವರೇ ಸರ್ಕಾರದ ಕಿಡಿಕಾರುತ್ತಿದ್ದಾರೆ.
Advertisement
ಈ ಹೊತ್ತಲ್ಲೇ ರಾಯಚೂರಿನಲ್ಲಿ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜುಳಾ ಮನೆ ಮುಂದಿನ ಸಾರ್ವಜನಿಕ ಮಾರ್ಗಕ್ಕೆ ಕಾಂಕ್ರೀಟ್ ಹಾಕದೇ ಬಿಜೆಪಿ ಕೌನ್ಸಿಲರ್ ನಾಗರಾಜ್ ಠಕ್ಕರ್ ಕೊಟ್ಟಿದ್ದಾರೆ. ವಾರ್ಡ್ನ ಎಲ್ಲಾ ದಿಕ್ಕಿನಲ್ಲೂ ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ.
ಕೆಪಿಸಿಸಿ ಸೆಕ್ರೆಟರಿ ಮನೆ ರಸ್ತೆಗೆ ಮಾತ್ರ ಕಾಂಕ್ರೀಟ್ ಹಾಕದೆ ಬಿಜೆಪಿ ಕೌನ್ಸಿಲರ್ ತಿರುಗೇಟು ಕೊಟ್ಟಿದ್ದಾರೆ. ಸದ್ಯ ಅನುದಾನ ಖಾಲಿ ಆಗಿದೆ, ನಿಮ್ಮ ಸಿಎಂ ಸಿದ್ದರಾಮಯ್ಯಗೆ ಹೇಳಿ ಅನುದಾನ ಕೊಡಿಸಿ. ಆ ಮೇಲೆ ನಿಮ್ಮ ಮನೆ ಮುಂದಿನ ಮಾರ್ಗಕ್ಕೆ ಕಾಂಕ್ರೀಟ್ ರಸ್ತೆ ಮಾಡಿಸುತ್ತೇನೆ ಎಂದು ಕೌನ್ಸಿಲರ್ ನಾಗರಾಜ್ ಹೇಳಿದ್ದಾರೆ.