HomeBengaluru NewsPower Cut: ಬೆಂಗಳೂರಿನ ಈ ಬಡಾವಣೆಗಳಲ್ಲಿ ಇಂದು ಇರಲ್ಲ ಕರೆಂಟ್!

Power Cut: ಬೆಂಗಳೂರಿನ ಈ ಬಡಾವಣೆಗಳಲ್ಲಿ ಇಂದು ಇರಲ್ಲ ಕರೆಂಟ್!

For Dai;y Updates Join Our whatsapp Group

Spread the love

ಬೆಂಗಳೂರು :- ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಕರ್ನಾಟಕ ವಿದ್ಯುತ್​ ಸರಬರಾಜು ನಿಗಮ ನಿಯಮಿತ ಇಂದು ತುರ್ತು ದುರಸ್ತಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಪವರ್ ಕಟ್ ಇರಲಿದೆ.

ಗಂಗಾನಗರ, ಆ‌ರ್.ಟಿ.ನಗರ, ಸಿಬಿಐ ಮುಖ್ಯರಸ್ತೆ,ವೇಣುಗೋಪಾಲ ಬಡಾವಣೆ, ಸಂಜಯನಗರ, ಯೋಗೇಶ್ವರ ನಗರ, ಗಂಗಾನಗರ ಮಾರುಕಟ್ಟೆ, ಚೋಳನಾಯಕನಹಳ್ಳಿ, ಗುಡ್ಡದಹಳ್ಳಿರಸ್ತೆ, ಅಶ್ವಥ್ ನಾಗರಸನ್ ಜಯನಗರ, ಮೊಹಮ್ಮದ್ ಬಡಾವಣೆ, ಅಮರಜ್ಯೋತಿ ಬಡಾವಣೆ, ಗುಂಡಪ್ಪರೆಡ್ಡಿ ಬಡಾವಣೆ, ಕೆಂಪಣ್ಣ ಬಡಾವಣೆ, ನೇತಾಜಿನಗರ, ಚಿನ್ನಮ್ಮ ಬಡಾವಣೆ, ಸೀತಪ್ಪ ಬಡಾವಣೆ, ಸಿಐಎಲ್ ಬಡಾವಣೆ, ಮೈತ್ರಿ ಬಜಾ‌ರ್. ತಿಮ್ಮಕ್ಕ ಬಡಾವಣೆ. ಅಕ್ಕಯ್ಯಮ್ಮ ಬಡಾವಣೆ, ಗುಡ್ಡದಹಳ್ಳಿ ವೃತ್ತ, ಗುಂಜೂರು ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 4ರವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಸುಂಕದಕಟ್ಟೆ, ಕಾಮಾಕ್ಷಿಪಾಳ್ಯ, ಮಲ್ಲತ್ತಹಳ್ಳಿ, ನೀಲಗಿರಿ ತೋಪು, ಹೆಗ್ಗನಹಳ್ಳಿ, ಅನ್ನಪೂರ್ಣೇಶ್ವರಿನಗರ, ಪಟ್ಟೆಗಾರಪಾಳ್ಯ, ಕೊಟ್ಟಿಗೆಪಾಳ್ಯ, ಕೆಂಗುಂಟೆ, ಕುವೆಂಪು ರಸ್ತೆ, ವಿಜ್ಞಾನನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಪವರ್​ ಕಟ್​ ಆಗಲಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!