ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಖತ್ ಖ್ಯಾತಿ ಘಳಿಸಿದ ನಟಿ ವೈಷ್ಣವಿ ಗೌಡ ಇತ್ತೀಚೆಗೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ಅನುಕೂಲ್ ಮಿಶ್ರಾ ಅವರ ಜೊತೆ ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿರುವ ವೈಷ್ಣವಿ ಗೌಡ ಸದ್ಯ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. ಹಲವು ಬಾರಿ ವೈಷ್ಣವಿ ಗೌಡ ಅವರಿಗೆ ನೆಟ್ಟಿಗರು ತಾಳಿ ಹಾಕುತ್ತಿಲ್ಲ ಏಕೆ ಎಂಬ ಪ್ರಶ್ನೆ ಕೇಳುತ್ತಲೇ ಇದ್ದರು. ಇದೀಗ ತಮ್ಮ ಯುಟ್ಯೂಬ್ ಮೂಲಕ ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.
‘ಮದುವೆ ಆದಮೇಲೆ ತಾಳಿ ಯಾಕೆ ಹಾಕುತ್ತಿಲ್ಲ, ಸಂಪ್ರದಾಯಕ್ಕೆ ಗೌರವ ಕೊಡುತ್ತಿಲ್ಲ, ಹಾಗಿದ್ದರೆ ಮದುವೆ ಯಾಕೆ ಬೇಕಿತ್ತು ಎಂದು ಕೆಲವರು ಕೇಳಿದ್ದಾರೆ. ಅದರ ಬಗ್ಗೆ ಮಾತನಾಡುತ್ತಿದ್ದೇನೆ. ಹುಡುಗರ ಮನೆ ಸಂಪ್ರದಾಯವನ್ನು ಹಡುಗಿಯರು ಪಾಲಿಸಬೇಕು. ನಾನು ಅದನ್ನೇ ಮಾಡುತ್ತಿದ್ದೇನೆ. ನಾನು ತಾಳಿ ಏಕೆ ಹಾಕುತ್ತಿಲ್ಲ ಎಂದರೆ, ಅವರ ಪದ್ಧತಿಯಲ್ಲಿ ಅದು ಇಲ್ಲ’ ಎಂದು ವೈಷ್ಣವಿ ಗೌಡ ವಿವರಿಸಿದ್ದಾರೆ.
‘ನನ್ನ ಅತ್ತೆ ತಾಳಿ ಹಾಕುವುದಿಲ್ಲ. ಏಕೆ ಎಂದು ನಾನು ಕೇಳಿಲ್ಲ. ತಾಳಿ ಮುಖ್ಯ ಅಲ್ಲ ಎಂದು ಅವರು ಹೇಳಿದರು. ಆದರೆ, ಇಲ್ಲಿ ಬೇರೆ ಶಾಸ್ತ್ರ ಇದೆ. ಮೂಗಿಗೆ ಚುಚ್ಚಿರಬೇಕು. ಕೈಗೆ ಗಾಜಿನ ಬಳೆ, ಒಂದು ಥ್ರೆಡ್ ಇರಬೇಕು. ಜೊತೆಗೆ ಕಾಲಿಗೆ ಉಂಗುರ ಹಾಕಿಕೊಳ್ಳಬೇಕು’ ಎಂದು ಹೇಳುವ ಮೂಲಕ ತಾವು ತಾಳಿ ಯಾಕೆ ಹಾಕುವುದಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ.



