ರಾಜಣ್ಣರ ಮನಸ್ಸಿನಲ್ಲಿ ಕೆಡುಕಿಲ್ಲ, ಸಂಪುಟದಿಂದ ವಜಾ ಸರಿಯಲ್ಲ- ಸಿದ್ದಗಂಗಾ ಶ್ರೀ

0
Spread the love

ತುಮಕೂರು:- ರಾಜಣ್ಣರ ಮನಸ್ಸಿನಲ್ಲಿ ಕೆಡುಕಿಲ್ಲ, ಸಂಪುಟದಿಂದ ವಜಾ ಸರಿಯಲ್ಲ. ಎಂದು ಸಿದ್ದಗಂಗಾ ಶ್ರೀ ಬೇಸರ ಹೊರ ಹಾಕಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜಣ್ಣರ ಅವರು ಸಹಕಾರಿ ಧುರೀಣರು, ಸಹಕಾರಿ ಕ್ಷೇತ್ರಕ್ಕೆ ಅವರದ್ದೇ ಕೊಡುಗೆ ಇದೆ.

Advertisement

ಸಹಕಾರಿ ಮಹಾಮಂಡಲದ ಅಧ್ಯಕ್ಷರಾಗಿದ್ದ ಅವರು, ಬಡವರಿಗೆ, ರೈತರಿಗೆ ಸಹಾಯ ಮಾಡಲೆಂದೇ ಸಹಕಾರಿ ಖಾತೆ ಪಡೆದಿದ್ದರು. ಅದರಿಂದ ಜನರಿಗೆ ಅನುಕೂಲ ಕೂಡ ಮಾಡುತಿದ್ದರು. ಈಗ ಇದ್ದಕ್ಕಿದ್ದ ಹಾಗೆ ಸಂಪುಟದಿಂದ ಕೈಬಿಟ್ಟಿದ್ದಾರೆ ಅನ್ನೋ ಸುದ್ದಿ ಕೇಳಿ ಆಘಾತವಾಗಿದೆ ಎಂದು ಬೇಸರಿಸಿದರು.

ಯಾವಾಗಲೂ ರಾಜಣ್ಣ ನೇರ ನಿಷ್ಠುರವಾಗಿ ಮಾತನಾಡುವ ವ್ಯಕ್ತಿ. ಅವರ ಮನಸ್ಸಿನಲ್ಲಿ ಕೆಡುಕಿಲ್ಲ. ಅಂಥಹ ವ್ಯಕ್ತಿಯನ್ನು ಸಂಪುಟದಿಂದ ಕೈ ಬಿಟ್ಟಿರೋದು ನಿಜಕ್ಕೂ ಯೋಚಿಸಬೇಕಾದ ವಿಚಾರ ಎಂದು ಬೇಸರಿಸಿದರು. ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ ಎಂಬ ಭರವಸೆಯನ್ನು ಶ್ರೀಗಳು ವ್ಯಕ್ತಪಡಿಸಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ಕೊಟ್ಟರೆ ಪಕ್ಷಕ್ಕೆ ಹಾಗೂ ಜನರಿಗೆ ಒಳ್ಳೆದಾಗುತ್ತದೆ. ಸಿಎಂ ಈ ವಿಚಾರದಲ್ಲಿ ಗಮನಹರಿಸಿ ಹೈಕಮಾಂಡ್‌ಗೆ ಮನವೊಲಿಸಿ ಮತ್ತೆ ರಾಜಣ್ಣರನ್ನು ಸಂಪುಟ ಸೇರಿಸಿಕೊಳ್ಳಲಿ ಎಂದು ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here