ಬೆಂಗಳೂರು:- ಕಾರ್ಮಿಕ ಇಲಾಖೆಯಲ್ಲಿ ಅಕ್ರಮ ಆರೋಪದ ಕುರಿತು ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನನ್ನ ಇಲಾಖೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ. ಅಕ್ರಮದ ದಾಖಲಾತಿ ಕೊಟ್ಟರೆ ನಾನು ತನಿಖೆ ಮಾಡಿಸುತ್ತೇನೆ. ನಾನು ಮೋದಿ ವಿರುದ್ಧ ಮಾತನಾಡುತ್ತೇನೆ ಅಂತ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ದಾಖಲಾತಿಗಳು ಇದ್ದರೆ ಬಿಜೆಪಿ ಅವರು ಕೋರ್ಟ್‌ಗೆ ಹೋಗಲಿ. ಆರ್‌ಟಿಐ ಅನ್ನ ಈ ದೇಶದಲ್ಲಿ ಬಿಜೆಪಿ ಉಳಿಸಿದೆಯಾ ಎಂದು ಪ್ರಶ್ನಿಸಿದರು.
ಇವರು ಸುದ್ದಿಗೋಷ್ಟಿ ಮಾಡಿ ಆರೋಪ ಮಾಡಿದ ಕೂಡಲೇ ಸಿಬಿಐಗೆ ಕೊಡಬೇಕಾ? ಬಿಜೆಪಿ ಅವರು ದಾಖಲಾತಿ ಕೊಡಲಿ, ನಾನು ತನಿಖೆ ಮಾಡಿಸುತ್ತೇನೆ ಎಂದು ಸಂತೋಷ್ ಲಾಡ್ ತಿರುಗೇಟು ನೀಡಿದರು.