ಕರ್ನಾಟಕದಲ್ಲಿ ಸಿದ್ದರಾಮಯ್ಯರಂಥ ನಾಯಕ ಯಾರಿಲ್ಲ: ವಾಟಾಳ್ ನಾಗರಾಜ್!

0
Spread the love

ಬೆಂಗಳೂರು:– ಕರ್ನಾಟಕದಲ್ಲಿ ಸಿದ್ದರಾಮಯ್ಯರಂಥ ನಾಯಕ ಯಾರಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ. ಸಿದ್ದರಾಮಯ್ಯ ನಂತರ ಅವರಂತಹ ನಾಯಕ ರಾಜ್ಯದಲ್ಲಿ ಯಾರೂ ಇಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನಲ್ಲೂ ಇಲ್ಲ. ಜೆಡಿಎಸ್‌ನಲ್ಲಿ ಸಿದ್ದರಾಮಯ್ಯರನ್ನು ತೆಗೆದಾಗ ನಾನು ಹೋರಾಟ ಮಾಡಿದ್ದೆ.

ಇದು ಮೋಸದ ವ್ಯವಸ್ಥೆ, ರಾಜ್ಯಪಾಲರಿಗೆ ಈ ಅಧಿಕಾರ ಇರಬಾರದು. ಲೋಕಸಭೆಯಲ್ಲಿ ಇದರ ಬಗ್ಗೆ ಸಮಗ್ರವಾಗಿ ಚರ್ಚೆ ಆಗಬೇಕು. ಯಾವುದೇ ಶಕ್ತಿ ನಿಮ್ಮನ್ನು ಇಳಿಸುವುದಕ್ಕೆ ಹೋದರೆ ದೊಡ್ಡ ಕ್ರಾಂತಿ ಆಗುತ್ತದೆ ಎಂದು ಹೇಳಿದರು.

ಎಂದೂ ಯಾವುದೇ ಬಂದ್ ಮಾಡಬೇಡಿ ಎಂದು ಸಿದ್ದರಾಮಯ್ಯ ಹೇಳಲಿಲ್ಲ. ಬಂದ್ ಮಾಡಲಿಬಿಡಿ ಎಂದು ಪೊಲೀಸರಿಗೆ ಹೇಳಿದ್ದರು. ಕನ್ನಡದ ಮೇಲೆ ಸಿಎಂ ಸಿದ್ದರಾಮಯ್ಯಗೆ ಅಪಾರ ಗೌರವವಿದೆ. 62 ರಿಂದ 73 ರವರೆಗೆ ನಿರಂತರವಾಗಿ ಚಳುವಳಿ ಮಾಡಿದ್ದೇನೆ. ಬೇರೆ ಬೇರೆ ಭಾಷಿಕರು ನಡುಗುತ್ತಿದ್ದರು. ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ. ಮುಂದೊಂದು ದಿನ ನಾವು ಬೀದಿಗೆ ಇಳಿಯುತ್ತೇವೆ. ಪರಭಾಷೆ ಚಿತ್ರಗಳು ರಿಲೀಸ್ ಮಾಡುವುದಕ್ಕೆ ಬಿಡಲ್ಲ. ಬೇರೆ ಬೇರೆ ರಾಜ್ಯದಲ್ಲಿ ಕನ್ನಡ ಚಿತ್ರಗಳು ಇಲ್ಲ. ಹೀಗಾಗಿ ನಮ್ಮ ಹೋರಾಟ ಅನಿವಾರ್ಯ.

ಕನ್ನಡಿಗರ ಉದ್ಯೋಗದ ಬಗ್ಗೆ ಮಸೂದೆ ತಂದಿದ್ದರು, ಆದರೆ ಮರಳಿ ಪಡೆದಿದ್ದಾರೆ. ಮೋಹನ್ ದಾಸ್ ಪೈ ಇದ್ರೆ ಇರಲಿ ಇಲ್ಲ ಹೋಗಲಿ. ಅವರು ಯಾರು ಅಂತ ನನಗೆ ಗೊತ್ತು. ತಾವು ಕನ್ನಡದ ಬಗ್ಗೆ ಅಭಿಮಾನಿಯಾಗಿದ್ದೀರಿ, ಕನ್ನಡದ ಮುಖಂಡರು ನೀವು. ಹಿಂದೆ ತುಂಬಾ ಅದ್ಭುತವಾದ ವ್ಯಕ್ತಿಗಳಿದ್ದರು. ಇವರ ಮುಂದೆ ರಾಮಕೃಷ್ಣ ಹೆಗ್ಡೆ ನಡುಗುತ್ತಿದ್ದರು. ಈಗ ಯಾರು ಇದ್ದಾರೆ? ವಿಧಾನಸಭೆ ಅಂದರೆ ಹೇಗೆ ಇರಬೇಕು? ವಿಧಾನಸಭೆಗೆ ಯಾರು ಬರಬೇಕು. ಜೈಲಿಗೆ ಹೋದವರು, ದರೋಡೆ ಮಾಡಿದವರು ಬರಬೇಕಾ ಎಂದು ಪ್ರಶ್ನಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here