ಬೆಂಗಳೂರು:- ಸಿಎಂ ದೆಹಲಿ ಪ್ರವಾಸ, ನವೆಂಬರ್ ಕ್ರಾಂತಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಬೋಸರಾಜು ತಿರುಗೇಟು ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಅವರು ಪುಸ್ತಕ ಬಿಡುಗಡಗೆ ದೆಹಲಿಗೆ ಹೋಗ್ತಿದ್ದಾರೆ. ರಾಹುಲ್ ಟೈಂ ಕೊಟ್ಟರೆ ಭೇಟಿಯಾಗೋದಾಗಿ ಸಿಎಂ ಹೇಳಿದ್ದಾರೆ. ಸಮಯ ಸಿಕ್ಕರೆ ಸಹಜವಾಗಿ ಕ್ಯಾಬಿನೆಟ್ ಪುನರ್ ರಚನೆ ಬಗ್ಗೆ ಮಾತಾಡ್ತಾರೆ. ದೆಹಲಿಗೆ ಹೋದ್ರೆ ಹೈಕಮಾಂಡ್ ಭೇಟಿಯಾಗೋದು ಸಹಜ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಹೈಕಮಾಂಡ್ ನಾಯಕರ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸತೀಶ್ ಜಾರಕಿಹೊಳಿ ಇಲಾಖೆ ಕೆಲಸಕ್ಕೆ ದೆಹಲಿಗೆ ಹೋಗಿದ್ದಾರೆ. ಹಾಗೇ ಹೈಕಮಾಂಡ್ ಅವರನ್ನ ಭೇಟಿಯಾಗಿದ್ದಾರೆ ಅಷ್ಟೆ. ಅದೊಂದು ಸಹಜ ಭೇಟಿ. ಅದು ರಾಜಕೀಯ ಭೇಟಿಯಲ್ಲ. ಬಿಜೆಪಿ ಅವರು ಹೇಳಿದಂತೆ ಯಾವುದೇ ಕ್ರಾಂತಿ ಇಲ್ಲ. ಬ್ರಾಂತಿಯೂ ಇಲ್ಲ. ಕೊನೆದಾಗಿ ಬಿಜೆಪಿ ಅವರು ವಾಂತಿ ಮಾಡಿಕೊಳ್ತಾರೆ ಅಷ್ಟೆ.
ಸೆಪ್ಟೆಂಬರ್, ನವೆಂಬರ್ ಕ್ರಾಂತಿ ಅಂದಿದ್ದು ಅಶೋಕ್, ವಿಜಯೇಂದ್ರ ಹೇಳಿಕೊಟ್ಟಿದ್ದರು. ಅವರು ಹೇಳಿದಂತೆ ಸಿಎಂ ಬದಲಾವಣೆ ಆಗಿಲ್ಲ. ಅಶೋಕ್, ವಿಜಯೇಂದ್ರ ಅವರ ಸ್ಥಾನ ಬದಲಾವಣೆ ಆಗ್ತಿದೆ ಅಷ್ಟೆ. ಬಿಜೆಪಿಯಲ್ಲಿ ಅಶೋಕ್, ವಿಜಯೇಂದ್ರ ಇಬ್ಬರ ಸ್ಥಾನ ಬದಲಾವಣೆ ಅಂತ ಚರ್ಚೆ ಆಗ್ತಿದೆ. ಅವರು ಬದಲಾವಣೆ ಆದ್ರೆ ಅವರಿಗೆ ವಾಂತಿ ಬರುತ್ತೆ ಅಷ್ಟೆ. ಮೊದಲು ಬಿಜೆಪಿಯವರು ಅವರ ಕುರ್ಚಿ ನೋಡಿಕೊಳ್ಳಲಿ. ನಮ್ಮ ಬಗ್ಗೆ ಯಾಕೆ ಮಾತಾಡ್ತಾರೆ ಅಂತ ಎಂದು ಆಕ್ರೋಶ ಹೊರಹಾಕಿದ್ದಾರೆ. ಜನರು ನಮ್ಮ ಸರ್ಕಾರದಿಂದ ಖುಷಿಯಾಗಿದ್ದಾರೆ. ಅಭಿವೃದ್ಧಿ ಕೆಲಸಗಳು ಆಗ್ತಿದೆ. ಕಬ್ಬು ಸಮಸ್ಯೆಯನ್ನು ಸಿಎಂ ಸರಿ ಮಾಡಿದ್ದಾರೆ. ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಯಾವುದೇ ಕ್ರಾಂತಿ ಇಲ್ಲ ಎಂದಿದ್ದಾರೆ.


