ಬೆಂಗಳೂರು: ಪ್ರಕೃತಿ ಮುಂದೆ ಯಾರೂ ಇಲ್ಲ. ದುಬೈ, ದೆಹಲಿ ಸೇರಿದಂತೆ ಹಲವೆಡೆ ಮಳೆ ಆಗ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರಕೃತಿ ಮುಂದೆ ಯಾರೂ ಇಲ್ಲ. ದುಬೈ, ದೆಹಲಿ ಸೇರಿದಂತೆ ಹಲವೆಡೆ ಮಳೆ ಅಗ್ತಿದೆ. ಬರಗಾಲ ಪ್ರದೇಶದಲ್ಲಿಯೂ ಮಳೆ ಆಗ್ತಿದೆ. ನಾವು ಇಡೀ ತಂಡದಿಂದ ಮಾಹಿತಿ ತರಿಸಿಕೊಂಡಿದ್ದೇನೆ.
ನಾನು ನಿನ್ನೆ ನೆಲಮಂಗಲ ರಸ್ತೆಯಲ್ಲಿ ತಗಲಾಕಿಕೊಂಡಿದ್ದೆ. ನಿನ್ನೆ ರಾತ್ರಿ ಎಲ್ಲಾ ರಿವ್ಯೂವ್ ಮಾಡಿದ್ದೇನೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದಾಸರಹಳ್ಳಿಯಲ್ಲಿ ಒಂದು ಟ್ಯಾಂಕ್ ಒಡೆದು ಹೋಗಿದೆ. ಮಹದೇವಪುರ, ಭದ್ರಪ್ಪ ಲೇಔಟ್, ರಮಣಶ್ರೀ ಸೇರಿದಂತೆ ಎಲ್ಲ ಕಡೆ ಮಳೆ ಆಗಿದೆ. ಎಲ್ಲ ಕಡೆ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ. ಇನ್ನೂ ಕೆರೆಗೆ ಮಕ್ಕಳು ಬಿದ್ದಿರುವುದು ನನ್ನ ಗಮನಕ್ಕೆ ಬಂದಿದೆ. ಪಾಪ ತಾಯಿಯ ಗೋಳು ಟಿವಿಯಲ್ಲಿ ನೋಡಿದೆ ಎಂದು ಡಿಸಿಎಂ ಮರುಕ ವ್ಯಕ್ತಪಡಿಸಿದ್ದಾರೆ.


