ವಿಜಯಸಾಕ್ಷಿ ಸುದ್ದಿ, ಗದಗ: ‘ಕೃಷಿ ಸಖಿ’ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸ್ವ–ಸಹಾಯ ಸಂಘಗಳ ಮೂಲಕ ಜಿಲ್ಲೆಯ ಗದಗ ಮತ್ತು ಮುಂಡರಗಿ ತಾಲೂಕಿನ 450 ರೈತರಿಂದ ಖರೀದಿಸಿದ್ದ ಕಡಲೆಗೆ 12 ತಿಂಗಳಾದರೂ ಬಾಕಿ ಹಣ ಪಾವತಿಸಿಲ್ಲ. 2025ರ ಜನವರಿ 5ರೊಳಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಹಣ ಕೊಡಿಸಬೇಕು. ಇಲ್ಲದಿದ್ದರೆ ಜನವರಿ 6ರಿಂದ ಸೂಕ್ತ ನ್ಯಾಯ ಕೋರಿ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಡಿ.ಎಚ್. ನವಲಗುಂದ ಹಾಗೂ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಹಾದೇವಿ ಹುಯಿಲಗೋಳ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗದಗ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯಿAದ ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್ಆರ್ಎಂಎಲ್) ಗದಗ ಒಕ್ಕೂಟದಡಿ ‘ಕೃಷಿ ಸಖಿ’ಗಳನ್ನು ನೇಮಿಸಿದೆ. ಇದರಡಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಎನ್ಆರ್ಎಂಎಲ್ ಜಿ.ಪಂ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಲಿಗಾರ, ತಾ.ಪಂ ಕಾರ್ಯಕ್ರಮ ವ್ಯವಸ್ಥಾಪಕ ಆನಂದ ಬೆಳವಣಿಕಿ ಹಾಗೂ ತಾಲೂಕಾ ತಾಂತ್ರಿಕ ಸಂಯೋಜಕ ಜಗದೀಶ ಕಂಬಾಳಿಮಠ ಎಂಬುವವರು ದಾವಣಗೆರೆಯ ಮಾರುತಿ ಗೌಡ ಎಂಬುವವರೊAದಿಗೆ ಮಧ್ಯಸ್ಥಿಕೆ ವಹಿಸಿ ಮೂರು ತಿಂಗಳಲ್ಲಿ ಅಂದಾಜು 27 ಕೋಟಿ ರೂ. ಮೌಲ್ಯದ ಕಡಲೆಯನ್ನು ಹಲವು ಗ್ರಾಮಗಳಲ್ಲಿ ಖರೀದಿಗೆ ಕೊಡಿಸಿದ್ದಾರೆ.
ಈ ಪೈಕಿ 20 ಕೋಟಿ ರೂ. ಹಣವನ್ನು ಆರ್ಟಿಜಿಎಸ್ ಮೂಲಕ ಪಾವತಿಸಿದ್ದು, ಬಾಕಿ ಉಳಿದ 6.50 ಕೋಟಿ ರೂ. ಹಣವನ್ನು ಪಾವತಿಸುತ್ತಿಲ್ಲ. ಸಂಬAಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಕೇಳಿದರೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಕೆಲವರು 2023ರ ಆಗಸ್ಟ್ ತಿಂಗಳಲ್ಲಿ ಇದು ಅಂತ್ಯಗೊAಡಿದೆ ಎನ್ನುತ್ತಾರೆ. ಆದರೆ, 2024ರ ಜನವರಿಯಲ್ಲಿ ಇವರು ಕಡಲೆ ಖರೀದಿಸಿದ್ದು ಹೇಗೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣ ಬಿರಸಲ, ಎಸ್.ಬಿ. ಮುಲ್ಲಾ, ಸೋಮನಾಥ ಎಸ್.ಲಮಾಣಿ, ಲಕ್ಷ್ಮೀ ಹಿತ್ತಲಮನಿ, ಸರಸ್ವತಿ ದಾಸರ, ಸರಸ್ವತಿ ಬೆಟಗೇರಿ, ಶಿವಪ್ಪ ಮೂಲಿಮನಿ, ವೆಂಕಣ್ಣ ಮಲ್ಲರೆಡ್ಡಿ, ಸೋಮರಡ್ಡಿ ಹೊಸಮನಿ, ಪಂಚಾಕ್ಷರಯ್ಯ ಬೆಟಗೇರಿಮಠ, ಸಿದ್ದಪ್ಪ ಮುಳ್ಳೂರ, ಬಸವರಾಜ ಬಾಳಿಕಾಯಿ, ಮಂಜುನಾಥ ಗೋಡಿ, ವಾಯ್.ಎನ್. ಕೆಂಚನಗೌಡ್ರ, ಆನಂದ ಸಗರ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಸೂಚನೆಯಂತೆ ಖರೀದಿ ನಡೆದಿದೆ. ಕಡಲೆ ಖರೀದಿಸಿದ ವ್ಯಕ್ತಿ 12 ತಿಂಗಳಾದರೂ ಈ ಹಣ ನೀಡುತ್ತಿಲ್ಲ. ಕಡಲೆ ಖರೀದಿ ವೇಳೆ ಎನ್ಆರ್ಎಂಎಲ್ ಮನವಿ ಮೇರೆಗೆ ರೈತರನ್ನು ಪರಿಚಯಿಸಲು ಮಧ್ಯಸ್ಥಿಕೆ ವಹಿಸಿದ್ದ ಸ್ಥಳೀಯ ಮಹಿಳಾ ಸಂಘದ ಸದಸ್ಯರು ಒತ್ತಡಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪರಿಹಾರ ಸಿಕ್ಕಿಲ್ಲ. ಆದ್ದರಿಂದ, ಅನಿವಾರ್ಯವಾಗಿ ಧರಣಿ ನಡೆಸಲು ನಿರ್ಧರಿಸಿದ್ದೇವೆೆಂದು ಡಿ.ಎಚ್. ನವಲಗುಂದ ತಿಳಿಸಿದರು.