ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ನಡೆಯುತ್ತಿರುವ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Advertisement
ನಗರದ “ಮಲ್ಲೇಶ್ವರಂ, ಎಂ.ಡಿ.ಬ್ಲಾಕ್, ವೈಯಾಲಿಕಾವಲ್, ಈಜುಕೊಳ ವಿಸ್ತರಣೆ, ಕೋದಂಡರಾಮಪುರ, ರಂಗನಾಥಪುರ, ಬಿಎಚ್‌ಇಎಲ್, ಐಐಎಸ್‌ಸಿ ಬ್ರೈನ್ ಸೆಂಟರ್, ಅಂಬೇಡ್ಕರ್ ನಗರ, ಯಶವಂತ ಪುರ ಪೈಪ್‌ಲೈನ್ ರಸ್ತೆ, ಎಲ್‌ಎನ್ ಕಾಲೋನಿ, ಸುಬೇದ್ರಪಾಳ್ಯ, ದಿವಾನರ ಪಾಳ್ಯ, ಕೆ.ಎನ್. ವಿಸ್ತರಣೆ, ಯಶವಂತಪುರ 1ನೇ ಮುಖ್ಯರಸ್ತೆ, ಎಚ್.ಎಂ.ಟಿ. ಮುಖ್ಯ ರಸ್ತೆ, ಮಾಡೆಲ್ ಕಾಲೋನಿ, ಶರೀಫ್ ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಕರೆಂಟ್ ಇರುವುದಿಲ್ಲ.
ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.