ಬೆಂಗಳೂರು:- ತುರ್ತು ಕಾಮಗಾರಿ ಹಿನ್ನೆಲೆ ಕಳೆದ ಹಲವು ದಿನಗಳಿಂದ ಪವರ್ ಕಟ್ ಮಾಡುತ್ತಿರುವ ಬೆಸ್ಕಾಂ, ನಾಳೆಯೂ ನಗರದ ಹಲವೆಡೆ ಪವರ್ ಕಟ್ ಇರಲಿದೆ.
ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ಪವರ್ ಕಟ್ ಇರಲಿದೆ. ದೂರದರ್ಶನ ಕೇಂದ್ರ, ಮುನ್ಸಿಪಾಲ್ ಕಾರ್ಪೋರೇಷನ್, ಸರ್ಕ್ಯೂಟ್ ಹೌಸ್, ಪಿಜೆ ಲೇಔಟ್, ಎಂಸಿಸಿ ಎ ಬ್ಲಾಕ್, ವಿನೋಭಾ ನಗರ, ಸೂಪರ್ ಮಾರ್ಕೆಟ್, ಕಾರ್ಪೊರೇಷನ್ ಸರ್ಕಲ್, ಕುವೆಂಪು ನಗರ, ರಾಜಾಜಿನಗರ ಸೇರಿದಂತೆ ಹಲವು ಕಡೆ ವಿದ್ಯುತ್ ವ್ಯತ್ಯಯ ಆಗಲಿದೆ.
ಬೂಮರೆಡ್ಡಿ ಕಾಲೋನಿ, 515 ಕಾಲೋನಿ, ಕೋಡಿಹಳ್ಳಿ ಗ್ರಾಮ, 17, 18 ಹಾಗೂ 19ನೇ ಅಡಿ ಮುಖ್ಯರಸ್ತೆ, ಸರ್ವೀಸ್ ರಸ್ತೆ 100, 13ನೇ ಎಚ್, 12ನೇ ಮುಖ್ಯರಸ್ತೆ, ದೊಮ್ಮಲೂರು 2ನೇ ಹಂತ, 6ನೇ ಮುಖ್ಯ ಡಿಫೆನ್ಸ್ ಕಾಲೋನಿ, 80 ಅಡಿ ರಸ್ತೆ, 11ನೇ ಮುಖ್ಯರಸ್ತೆ, ಹಳೆ ತಿಪ್ಪಸಂದ್ರ, ಹೊಸ ತಿಪ್ಪಸಂದ್ರ, ಎಂಜಿ ರಸ್ತೆಗಳಲ್ಲಿ ಪವರ್ ಕಟ್ ಇರಲಿದೆ.
ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಮ್ಯೂಸಿಯಂ ರಸ್ತೆ, ರೆಸ್ಟ್‌ಹೌಸ್ ರಸ್ತೆ, ರಿಚ್ಮಂಡ್ ರಸ್ತೆ, ಕಸ್ತೂರಬಾ ರಸ್ತೆ, ವಾಲ್ಟನ್ ರಸ್ತೆ, ಡಿಕನ್ಸನ್ ರಸ್ತೆ, ಅಶೋಕ್ ನಗರ, ಪ್ರೈಮ್‌ರೋಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಟ್ರಿನಿಟಿ ಸರ್ಕಲ್, ಹಲಸೂರು ರಸ್ತೆ, ಮರ್ಫಿ ಪಟ್ಟಣ, ಹಲಸೂರು ಗೀತಾಂಜಲಿ ಲೇಔಟ್ನಲ್ಲೂ ಕರೆಂಟ್ ಇರಲ್ಲ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.