ಬಿಜೆಪಿಗರಲ್ಲಿ ಒಗ್ಗಟ್ಟಿಲ್ಲ, ರಾಜಕೀಯ ಬಿಟ್ಟರೆ ಅವರಿಗೆ ಬೇರೇನು ಬೇಕಿಲ್ಲ: ಡಿಕೆಶಿ!

0
Spread the love

ಹುಬ್ಬಳ್ಳಿ:- ಬಿಜೆಪಿಗರಲ್ಲಿ ಒಗ್ಗಟ್ಟಿಲ್ಲ, ರಾಜಕೀಯ ಬಿಟ್ಟರೆ ಅವರಿಗೆ ಬೇರೇನು ಬೇಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಬಿಜೆಪಿಯವರಿಗೆ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡುವ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿಗೆ ರಾಜಕೀಯ ಬಟ್ಟರೆ ಬೇರೇನು ಬೇಕಿಲ್ಲ ಎಂದರು.

ಅವರಲ್ಲಿ ಒಗ್ಗಟ್ಟು ಇಲ್ಲ, ಅದಕ್ಕೆ ಏನೇನೋ ಮಾಡುತ್ತಿದ್ದಾರೆ. ಅವರೇನೇ ಚರ್ಚೆ ಮಾಡಿದರೂ ನಾವು ಎಲ್ಲದಕ್ಕೂ ರೆಡಿ ಇದ್ದೇವೆ. ಮಹದಾಯಿ ವಿಚಾರವಾಗಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ್ದೇನೆ. ಜೋಶಿ ಅವರನ್ನು ಸಹ ಭೇಟಿ ಮಾಡಿದ್ದೇನೆ. ಅವರು ಯಾವಾಗ ಅನುಮತಿ ಕೊಡುತ್ತಾರೆ ಅಂತಾ ಕಾಯುತ್ತಿದ್ದೇವೆ. ಎಲ್ಲಾ ಪ್ಲ್ಯಾನ್ ಸಿದ್ಧವಿದೆ ಎಂದು ತಿಳಿಸಿದರು.

ಕೆಲಸ ಪ್ರಾರಂಭ ಮಾಡುತ್ತೀವಿ. ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ಇಬ್ಬರು ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾಕೆಂದರೆ ಮಹದಾಯಿ ಸಂಭ್ರಮಾಚರಣೆ ಮಾಡಿದ್ದು ಅವರು. ಆದರೆ, ಕೆಲಸ ಮಾಡೋರು ನಾವು. ಅವರಿಂದ ಸಣ್ಣ ಅರಣ್ಯ ಅನುಮತಿ ಸಿಗುವ ಭರವಸೆ ಇದೆ ಎಂದರು.


Spread the love

LEAVE A REPLY

Please enter your comment!
Please enter your name here