ಬೆಂಗಳೂರು: ವಿಜಯೇಂದ್ರ ಕಿರು ವಯಸ್ಸಿನಲ್ಲಿ ಅಧ್ಯಕ್ಷ ಆಗಿರೋದಕ್ಕೆ ವಿರೋಧ ಇರಬಹುದು ಎಂದು ಮಾಜಿ ಸಚಿವ ಬಿಜೆಪಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಗರದಲ್ಲಿ ಯತ್ನಾಳ್ ಟೀಂ ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೂ ಕೂಡಾ ಉಚ್ಚಾಟನೆ ಆಗಬಾರದು.
Advertisement
ಮನುಷ್ಯ ಎಂದ ಮೇಲೆ ತಪ್ಪು ಆಗೋದು ಸಹಜ. ಯತ್ನಾಳ್ ಕೂಡಾ ಮಂತ್ರಿ ಆಗಿದ್ದವರು. ಅನೇಕ ಜವಾಬ್ದಾರಿ ನಿಭಾಯಿಸಿದ್ದಾರೆ. ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದರು.
ವಿಜಯೇಂದ್ರ ಕಿರು ವಯಸ್ಸಿನಲ್ಲಿ ಅಧ್ಯಕ್ಷ ಆಗಿರೋದಕ್ಕೆ ವಿರೋಧ ಇರಬಹುದು. ಹೈಕಮಾಂಡ್ ಎಲ್ಲವನ್ನು ಅಳೆದು ತೂಗಿ ಅಧ್ಯಕ್ಷ ಮಾಡಿದ್ದಾರೆ. ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ಪರಿಹಾರ ಮಾಡುತ್ತದೆ ಎಂದರು.