ದಾವಣಗೆರೆ: ಡಿಕೆಶಿ ಸಿಎಂ, ವಿಜಯೇಂದ್ರ ಉಪಮುಖ್ಯ ಮಂತ್ರಿ ಅಂತ ದೆಹಲಿಯಲ್ಲಿ ಡೀಲ್ ಆಗಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ದಾವಣಗೆರೆಯಲಿ ಮಾತನಾಡಿದ ಅವರು, ನಾನು ಹೈಕಮಾಂಡ್ಗೆ ಕ್ಷಮೆ ಕೇಳಿಲ್ಲ. ಯಾವುದೂ ಪತ್ರ ಕೂಡ ಬರೆದಿಲ್ಲ, ಕೈಮುಗಿದಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ.
ಇನ್ನು ಡಿಕೆಶಿ ಸಿಎಂ, ವಿಜಯೇಂದ್ರ ಉಪಮುಖ್ಯ ಮಂತ್ರಿ ಅಂತ ದೆಹಲಿಯಲ್ಲಿ ಒಪ್ಪಂದ ಆಗಿತ್ತು. ನನಗೆ ಗೊತ್ತಿಲ್ವಾ ಅದು? ಕಾಂಗ್ರೆಸ್ ಸೇರುತ್ತಾರೆಂದು ಹೇಳುತ್ತಿದ್ದಾರೆ. ಅದು ಸುಳ್ಳು. ನಾನು ಸತ್ತರೂ, ನನ್ನ ಹೆಣ ಕೂಡ ಕಾಂಗ್ರೆಸ್ಗೆ ಹೋಗಲ್ಲ ಎಂದರು.
ಅದಲ್ಲದೆ ಒಂದು ಪಕ್ಷದ ರಾಜ್ಯಾಧ್ಯಕ್ಷ ಬರುತ್ತಾರೆ ಎಂದರೆ ಕನಿಷ್ಠ ಸಾವಿರಾರು ಜನರಾದರೂ ಸೇರಬೇಕು. ಆದರೆ, ಬಿಜೆಪಿ ನಡೆಸಿದ ಈ ಜನಾಕ್ರೋಶ ಯಾತ್ರೆಯಲ್ಲಿ 800-1000 ಜನ ಅಷ್ಟೇ ಸೇರಿದ್ದರು. ನಾನು ಯಾವುದಾದರೊಂದು ಕಾರ್ಯಕ್ರಮಕ್ಕೆ ತೆರಳಿದರೆ ಏನಿಲ್ಲವೆಂದರೂ 20 ಸಾವಿರ ಜನ ಸೇರುತ್ತಾರೆ. ಬಿಜೆಪಿ ಹೊಂದಾಣಿಕೆ ರಾಜಕಾರಣದಿಂದ ರಾಜ್ಯದ ಜನರಿಗೆ ಮೋಸ ಆಗುತ್ತಿದೆ ಎಂದರು.