ಬೆಂಗಳೂರು: ಸೆಲೆಕ್ಟಿವ್ ಆಗಿ ರಾಜ್ಯ, ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಇವಿಎಂ ಹ್ಯಾಕ್ ಮಾಡ್ತಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಮೊದಲಿಂದಲೂ ಇದನ್ನು ಹೇಳಿಕೊಂಡೇ ಬರುತ್ತಿದ್ದೇವೆ.
ಸೆಲೆಕ್ಟಿವ್ ಆಗಿ ರಾಜ್ಯ, ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಇವಿಎಂ ಹ್ಯಾಕ್ ಮಾಡ್ತಾರೆ. 2014 ರಿಂದಲೂ ಇದು ನಡೆದುಕೊಂಡು ಬರ್ತಿದೆ. ಮಹಾರಾಷ್ಟ್ರದಲ್ಲೂ ಆರೀತಿ ಆಗಿದೆ ಅಂತ ಚರ್ಚೆ ಆಗ್ತಿದೆ, ಅದನ್ನೇ ನಾನು ಹೇಳಿದ್ದು. ಬಿಜೆಪಿಯವರಿಗೆ ನನ್ನ ಹೇಳಿಕೆ ಸರಿಯಾಗಿ ಅರ್ಥ ಮಾಡಿಕೊಳ್ಳಲು ಹೇಳಿ ಎಂದು ಹೇಳಿದ್ದಾರೆ.
ಇನ್ನೂ ಮುಡಾದಲ್ಲಿ ಐಎಎಸ್ ಅಧಿಕಾರಿಯೊಬ್ರು 144 ದಾಖಲೆ ತೆಗೆದುಕೊಂಡು ಹೋದ ವಿಚಾರಕ್ಕೆ ಉತ್ತರಿಸಿದ ಅವರು, ಮುಡಾ ಪ್ರಕರಣದಲ್ಲಿ ತನಿಖೆ ನಡೀತಿದೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತೆ, ದಾಖಲೆ ತಗೊಂಡು ಹೋಗಿದ್ದಾರಾ? ಯಾರು ತಗೊಂಡು ಹೋದ್ರು? ಐಎಎಸ್ಸಾ? ಐಪಿಎಸ್ಸಾ? ಎಲ್ಲವೂ ತನಿಖೆಯಲ್ಲಿ ಬಯಲಾಗುತ್ತೆ. ತಪ್ಪು ಮಾಡಿದ್ರೆ ಕ್ರಮ ಆಗುತ್ತೆ ಎಂದು ಹೇಳಿದರು.