ಬಿಗ್ ಬಾಸ್ ನಲ್ಲಿ ಅವಕಾಶ ಕೊಡಿ ಅಂತ ಎತ್ತಿನಗಾಡಿಯಲ್ಲಿ ಬಂದು ಕಿಚ್ಚನ ಮನೆ ಮುಂದೆ ಪ್ರತಿಭಟನೆ

0
Spread the love

ಕಿಚ್ಚನ ಮನೆ‌ ಮುಂದೆ ವ್ಯಕ್ತಿಯೊಬ್ಬನ ಅತಿರೇಕದ ವರ್ತನೆ ಕಂಡು ಸೆಕ್ಯೂರಿಟಿ ಗಾರ್ಡ್ ಗಳು ಶಾಕ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗೋಕೆ‌ ಅವಕಾಶ ಮಾಡಿ ಕೊಡಿ ಅಂತ ರಾತ್ರೋ ರಾತ್ರಿ ಕಿಚ್ಚನ ಮನೆ ಮುಂದೆ ವ್ಯಕ್ತಿಯೊಬ್ಬ ಹೈ ಡ್ರಾಮ ಮಾಡಿದ್ದಾನೆ‌.
ಚಾನ್ಸ್ ಕೇಳೋಕೆ ಅಂತ ಎತ್ತಿನ ಗಾಡಿ ಮೂಲಕ ಬಂದಿರೋ ಮಂಜು ಅನ್ನೋ ವ್ಯಕ್ತಿ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ 10ಗಂಟೆವರೆಗೂ ಸುದೀಪ್ ಮನೆ ಮುಂದೆ ಕಾದು ನಿಂತಿದ್ದಾನೆ.

Advertisement

ಟಿ ನರಸಿಪುರದಿಂದ ಬಂದಿದಿನಿ ಅಂತ ಹೇಳಿದ್ದ ಮಂಜು, ನಾವು ಅನಕ್ಷರಸ್ತರು ರೈತರು ಬಿಗ್ ಬಾಸ್ ಹೋಗಲು ಅವಕಾಶ ಕೊಡಿ ಅಂತ ಎತ್ತಿನ ಗಾಡಿ ತಂದು ಸುದೀಪ್ ಮನೆ ಮುಂದೆ ನಿಲ್ಲಿಸಿದ್ದ. ನಂತರ ಸುದೀಪ್‌ ಮನೇಲಿಲ್ಲ ಚೆನ್ನೈ ಹೋಗಿದ್ದಾರೆ ಅಂತ ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳಿಸಿದ್ದಾರೆ.

ಮಂಜು ಹೇಳುವ ಪ್ರಕಾರ ಮನೆಯೊಳಗಿದ್ದ ವ್ಯಕ್ತಿಯೊಬ್ಬ ಮಂಜುಗೆ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿದ್ರಂತೆ.
ಧಮಾಕಿ ಸಹ ಹಾಕಿದ್ದಾರೆ ಅಂತ ಆರೋಪಿಸಿದ್ದಾನೆ. ಎತ್ತಿನ ಗಾಡಿಗೆ ಬ್ಯಾನರ್ ಕಟ್ಕೊಂಡ್‌ ಬಂದು ಜೆಪಿ ನಗರದ ಸುದೀಪ್‌‌ ಮನೆ ಮುಂದೆ ಗಾಡಿ ನಿಲ್ಲಿಸಿದ್ದ ಮಂಜುಗೆ ಬುದ್ದಿ ಹೇಳಿ ಕಳಿಸಲಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ


Spread the love

LEAVE A REPLY

Please enter your comment!
Please enter your name here