ಬೆಂಗಳೂರು: ಗಾಂಧಿ ರಾಜ್ಯಮಾಡ್ತೇವೆ ಎನ್ನುತ್ತಾರೆ ಆದರೆ ಗೂಂಡಾರಾಜ್ಯ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ MLC ಸಿಟಿ ರವಿ ಕಿಡಿಕಾರಿದ್ದಾರೆ. ಶಾಸಕ ಮುನಿರತ್ನ ಭೇಟಿ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ರಾಜ್ಯಮಾಡ್ತೇವೆ ಎನ್ನುತ್ತಾರೆ ಆದರೆ ಗೂಂಡಾರಾಜ್ಯ ಮಾಡ್ತಿದ್ದಾರೆ. ಇದಕ್ಕೆ ನನ್ನ ಮೇಲೆ ಮತ್ತು ಮುನಿರತ್ನ ಮೇಲೆ ನಡೆದ ಹಲ್ಲೆ ತಾಜಾ ಉದಾಹರಣೆಯಾಗಿದೆ ಎಂದು ಹೇಳಿದರು.
Advertisement
ಇನ್ನೂ ನನ್ನ ವಿಚಾರವನ್ನು ಮೂರು ಆಯಾಮದಲ್ಲಿ ನೋಡಬೇಕು. ಆರ್ಟಿಕಲ್ 194 ಪ್ರಕಾರ ಪರಮಾಧಿಕಾರವನ್ನು ಸಭಾಪತಿಗಳಿಗೆ ಕೊಡಲಾಗಿದೆ. ಸಭಾಪತಿಗಳ ನಿರ್ಣಯ ಅವರಿಗೆ ಬಿಟ್ಟಿದ್ದು. ಆದರೆ ಈ ಸರ್ಕಾರ ಕಾನೂನು ದುರ್ಬಳಕೆ ಮಾಡಿದೆ. ನನಗೆ ನೋಟಿಸ್ ಕೊಟ್ಟಿರಲಿಲ್ಲ, ಅಲ್ಲದೆ ಬಂಧನ ಮಾಡಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂದು ದೂರಿದ್ದಾರೆ.