ಬೆಂಗಳೂರು: ವ್ಯಾಪಾರ ದೃಷ್ಟಿಯಿಂದ ಹೆಸರು ಬದಲಾವಣೆ ಮಾಡುವುದಕ್ಕೆ ಹೊರಟಿದ್ದರು ಎಂದು ಶಾಸಕ ಅಶ್ವಥ್ ನಾರಾಯಣ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮಾಡಬೇಕೆಂಬ ಪ್ರಸ್ತಾಪ ತಿರಸ್ಕಾರ ಆಗಿದೆ.
Advertisement
ರಾಮನಗರ ಜಿಲ್ಲೆಯಾಗಿ ಉಳಿಯಬೇಕು. ರಿಯಲ್ ಎಸ್ಟೇಟ್ ಹೆಸರಲ್ಲಿ ಮಾರಾಟ ಮಾಡಬೇಕು ಎನ್ನುವುದು ಇದರ ದುರುದ್ದೇಶ. ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡದೆ, ಹೆಸರು ಬದಲಾಯಿಸಿ, ವ್ಯಾಪಾರ ದೃಷ್ಟಿಯಿಂದ ಹೆಸರು ಬದಲಾವಣೆ ಮಾಡುವುದಕ್ಕೆ ಹೊರಟಿದ್ದರು. ಇದು ರಾಮನಗರ ಜಿಲ್ಲೆಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.