ಚಂಡೀಗಢ:- ಹರಿಯಾಣದ ಜಿಂದಾ ಜಿಲ್ಲೆಯ ನರ್ವಾನದಲ್ಲಿ ಬಿಜೆಪಿ ನಾಯಕನ ಹೆಂಡತಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಇಬ್ಬರು ದುಷ್ಕರ್ಮಿಗಳು ಕಿತ್ತುಕೊಂಡು ಓಡಿ ಹೋಗಿರುವ ಘಟನೆ ಜರುಗಿದೆ.
ನರ್ವಾನದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಶರ್ಮಾ ಫ್ಯಾಮಿಲಿ ವಾಸವಿತ್ತು. ಎಂದಿನಂತೆ ಇವರ ಹೆಂಡತಿ ಮನೆಯ ಮುಂದಿನ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಇದೇ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವನ್ನು ಎಸಗಿದ್ದಾರೆ. ಒಬ್ಬ ಬೈಕ್ ಸ್ಟಾರ್ಟ್ ಮಾಡಿಕೊಂಡು ಪಕ್ಕದ ರಸ್ತೆಯಲ್ಲಿ ನಿಂತುಕೊಂಡಿರುವುದು ಸಿಸಿಟಿವಿ ವಿಡಿಯೋದಲ್ಲಿ ಕಂಡು ಬಂದಿದೆ.
ಇನ್ನೊಬ್ಬ ಕಿರಾತಕ, ಪ್ರಮೋದ್ ಶರ್ಮಾ ಅವರ ಹೆಂಡತಿಯನ್ನ ಫಾಲೋ ಮಾಡಿಕೊಂಡು ಬಂದು ಅವರ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಓಡಿ ಹೋಗಿ ಪಕ್ಕದ ರಸ್ತೆಯಲ್ಲಿ ನಿಂತಿದ್ದ ಬೈಕ್ ಹತ್ತಿಕೊಂಡು ಪರಾರಿಯಾಗಿದ್ದಾನೆ. ಸರ ಕಿತ್ತುಕೊಳ್ಳುತ್ತಿದ್ದಂತೆ ಬಿಜೆಪಿ ನಾಯಕನ ಹೆಂಡತಿ ಕಿರುಚಿದ್ದಾರೆ. ತಕ್ಷಣ ಅಕ್ಕಪಕ್ಕದ ಜನರು ಓಡಿ ಬಂದರು. ಆದ್ರೆ ಕಳ್ಳರು ಅಷ್ಟೊತ್ತಿಗೆ ಬೈಕ್ನಲ್ಲಿ ಪರಾರಿಯಾಗಿದ್ದರು. ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ.


