ಗದಗ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.
Advertisement
ಮಾಜಿ ಸಚಿವ ಸೇರಿದಂತೆ ಅನೇಕ ಮುಖಂಡರ ಕಿಸೆಗಳ್ಳತನ ನಡೆದಿದ್ದು, ಸಾವಿರಾರು ರೂಪಾಯಿ ಪಿಕ್ ಪಾಕೇಟ್ ನಡೆದಿದೆ. ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಪ್ಯಾಂಟ್‌ನಲ್ಲಿದ್ದ ಸುಮಾರು ನಲವತ್ತು ಸಾವಿರ ರೂಪಾಯಿ ಎಗರಿಸಿದ್ದಾರೆ.
ಸುಂಕದ ಎಂಬ ಕಾರ್ಯಕರ್ತನ ಹಣವೂ ಹೋಗಿದೆ ಎನ್ನಲಾಗಿದೆ. ಇವರಲ್ಲದೇ ಇನ್ನೂ ಅನೇಕ ಕಾರ್ಯಕರ್ತರು ಹಣ ಕಳೆದುಕೊಂಡ ಬಗ್ಗೆ ತಿಳಿದು ಬಂದಿದೆ.
ಇಂದಿನ ಸಮಾವೇಶದಲ್ಲಿ ಸಾವಿರಾರು ಜನ ಕಾರ್ಯಕರ್ತರು ಜಮಾವಣೆಗೊಂಡಿದ್ದು, ನೂಕು ನುಗ್ಗಲು ಆಗಿದ್ದರಿಂದ ಚಾಲಾಕಿ ಕಳ್ಳರು ತಮ್ಮ ಕೈ ಚಳಕ ಮೆರೆದಿದ್ದಾರೆ. ಹಣ ಕಳೆದುಕೊಂಡ ಮುಖಂಡರು ಹಾಗೂ ಕಾರ್ಯಕರ್ತರು ಕಳ್ಳರ ಕರಾಮತ್ತಿಗೆ ಕಂಗಾಲಾಗಿದ್ದಾರೆ.