ಧಾರವಾಡ: ಶ್ರೀಗಂಧದ ಮರಗಳನ್ನು ಖದೀಮರು ಹೊತ್ತೊಯ್ದಿರುವ ಘಟನೆ ನಗರದ ಸರ್ವೆ ಕಚೇರಿ ಆವರಣದಲ್ಲಿ ಜರುಗಿದೆ.
ಕಚೇರಿ ಆವರಣದಲ್ಲಿದ್ದ ಮೂರು ಶ್ರೀಗಂಧ ಮರಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ರಾತ್ರಿ ವೇಳೆ ಕಳ್ಳರು ಈ ಕೆಲಸ ಮಾಡಿದ್ದಾರೆ. ಅರಣ್ಯ ಇಲಾಖೆ ಕಚೇರಿ ಕೂಗಳತೆಯಲ್ಲಿಯೇ ಸಿಟಿ ಸರ್ವೆ ಕಚೇರಿ ಇದೆ. ಯಾವುದೇ ಭಯವಿಲ್ಲದೇ ಆರೋಪಿಗಳು ಕೃತ್ಯ ಎಸಗಿದ್ದಾರೆ.
ಸುಮಾರು ಹತ್ತು ವರ್ಷದ ಮೂರು ಮರಗಳನ್ನು ಕತ್ತರಿಸಿಕೊಂಡು ಹೋಗಿರುವ ಕಳ್ಳರು, ಮರದ ಮಧ್ಯದಲ್ಲಿ ಇರುವ ಶ್ರೀಗಂಧ ಮಾತ್ರ ತೆಗೆದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



