ಮಂಡ್ಯ: ದೇಗುಲದ ಹುಂಡಿ ಕದ್ದು ಹಣ ಎಣಿಸುವ ವೇಳೆ ಖದೀಮರು ಸಿಕ್ಕಿ ಬಿದ್ದಿರುವ ಘಟನೆ ಮಂಡ್ಯ ತಾಲೂಕಿನ ಮಾಂಡವ್ಯ ಕಾಲೇಜಿನ ಬಳಿ ನಡೆದಿದೆ. ಸಿಕ್ಕಿಬಿದ್ದ ನಾಲ್ವರು ಯುವಕರು ಮಂಡ್ಯ ತಾಲೂಕಿನ ಬೂದನೂರು ಗ್ರಾಮದವರೆಂದು ತಿಳಿದು ಬಂದಿದೆ.
Advertisement
ಕದ್ದ ಹುಂಡಿ ಹಣ ಹಂಚಿಕೆ ವಿಷಯವಾಗಿ ಕದ್ದವರಲ್ಲೇ ಗದ್ದಲ, ಗಲಾಟೆ ನಡೆಯುತ್ತಿತ್ತು. ಈ ವೇಳೆ ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ವಿಚಾರಣೆ ವೇಳೆ ದೇಗಲದ ಹುಂಡಿ ಕದ್ದಿರೋ ವಿಚಾರ ಖದೀಮರ ಗ್ಯಾಂಗ್ ಬಾಯ್ಬಿಟ್ಟಿದ್ದಾರೆ. ಸದ್ಯ ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.