ಹೊಸಕೋಟೆ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿ ಪ್ರದೇಶದಲ್ಲಿ ನಡೆದ ಕಳ್ಳತನ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪೊಲೀಸ್ ಠಾಣೆ ಎದುರಿನಲ್ಲೇ ಈ ಕಳ್ಳತನ ನಡೆದಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ನಂದಗುಡಿ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಮೆಡಿಕಲ್ ಸ್ಟೋರ್ ಮತ್ತು ಜನರಲ್ ಸ್ಟೋರ್ಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಚಿಂತಾಮಣಿ–ಹೊಸಕೋಟೆ ಮುಖ್ಯರಸ್ತೆಯ ಅಂಗಡಿಗಳ ಬೀಗ ಮುರಿದು ರಾತ್ರಿ ವೇಳೆ ಕಳ್ಳತನ ಮಾಡಿದ್ದಾರೆ.
ಸುಮಾರು ₹80 ಸಾವಿರ ಮೌಲ್ಯದ ಸಿಗರೇಟ್ ಬಂಡಲ್‌ಗಳು ಹಾಗೂ ₹70 ಸಾವಿರ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಬೆಳಿಗ್ಗೆ ಅಂಗಡಿ ಮಾಲೀಕರು ಅಂಗಡಿ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಹಿನ್ನೆಲೆ ಅಂಗಡಿ ಮಾಲೀಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಿಸಿಟಿವಿ ಅಳವಡಿಸಲು ಪೊಲೀಸರಿಗೆ ಹಣ ನೀಡಿದ್ದರೂ ಅವರು ಸಿಸಿಟಿವಿ ಅಳವಡಿಸಿಲ್ಲ ಎಂದು ಹರಿಹಾಯ್ದಿದ್ದಾರೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


