ಹಾವೇರಿ: ನಗರದ ಹೃದಯಭಾಗದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳ್ಳರು ಕೈಚಳಕ ತೋರಿದ್ದು, 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ಮಠದ ಎರಡು ಕೋಣೆಯ ಬೀಗ ಮುರಿದಿರುವ ಕಳ್ಳರು, 10,67,668 ರೂ. ಮೌಲ್ಯದ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಹಿತ್ತಾಳೆಯ ವಸ್ತುಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಡಾ. ವೀಣಾ ಎಸ್ ಮತ್ತು ಶ್ರೀನಿವಾಸ ವೈದ್ಯರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ಅನ್ವಯ ಸ್ಥಳಕ್ಕೆ ಹಾವೇರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳ್ಳತನವಾದ ವಸ್ತುಗಳು:
15 ಗ್ರಾಂ ಬಂಗಾರದ ಸರದ ಹುಕ್ಕು – 1,79,550 ರೂ.
18 ಗ್ರಾಂ ಬಂಗಾರದ ಸರ + ಒಂದು ಹುಕ್ಕು – 2,15,460 ರೂ.
6 ಗ್ರಾಂ ಬಂಗಾರದ ಪುಷ್ಪ ಎಲೆ – 71,820 ರೂ.
2 ಬೆಳ್ಳಿ ತಂಬಿಗೆ, 6 ಬೆಳ್ಳಿ ಆಚುಮ್ಯ ಲೋಟ, 6 ಬೆಳ್ಳಿ ಉದ್ದರಣಿ, 2 ಬೆಳ್ಳಿ ತಟ್ಟೆ, 1 ಬೆಳ್ಳಿ ಆರತಿ – 2,70,920 ರೂ.
75 ಕೆ.ಜಿ ರಥದ ಮೇಲಿನ ಹಿತ್ತಾಳೆಯ 3 ಕಳಸ – 1,00,000 ರೂ.
60 ಕೆ.ಜಿ ಹಿತ್ತಾಳೆಯ 20 ಪಾತ್ರೆಗಳು – 42,000 ರೂ.
18 ಕೆ.ಜಿ ತಾಮ್ರದ 50 ತಂಬಿಗಳು – 17,928 ರೂ.
207 ಕೆ.ಜಿ ಹಿತ್ತಾಳೆಯ 2 ಸಾಲು ದೀಪಗಳು – 42,000 ರೂ.
40 ಕೆ.ಜಿ ಹಿತ್ತಾಳೆಯ 20 ಗಂಟೆಗಳು – 20,000 ರೂ.
ಒಟ್ಟು ಹಾನಿ: 10,67,668 ರೂ.
ಘಟನೆ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯು ಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.