ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಕಳ್ಳರ ಗ್ಯಾಂಗ್ ಫುಲ್ ಆ್ಯಕ್ಟೀವ್ ಆಗಿದೆ.
ಅಶೋಕ್ ಲೈಲ್ಯಾಂಡ್ ವಾಹನ ಕದ್ದು ಕಳ್ಳರು ಎಸ್ಕೆಎಫ್ ಆಗಿದ್ದು, ಖದೀಮರ ಕೃತ್ಯ ಶೋರೂಂನ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಶ್ರೀ ಚಾಮುಂಡೇಶ್ವರಿ ಆಟೋ ಲಿಂಕ್ಸ್ ನಲ್ಲಿ ಘಟನೆ ಜರುಗಿದೆ.
ವೆಂಕಟೇಶ್ ಎಂಬುವರಿಗೆ ಸೇರಿದ ಚಾಮುಂಡೇಶ್ವರಿ ಆಟೋ ಸೆಕೆಂಡ್ ಶೋರೂಂ ಮುಂದೆ ನಿಲ್ಲಿಸಿದ್ದ KA 662637 ನಂಬರ್ ನ 7.ಲಕ್ಷ ಮೌಲ್ಯದ ಅಶೋಕ್ ಲೈಲ್ಯಾಂಡ್ ವಾಹನ ಕಳ್ಳತನವಾಗಿದ್ದು, ತಡರಾತ್ರಿ 5 ಜನರಿದ್ದ ಕಳ್ಳರ ಗ್ಯಾಂಗ್ ನಿಂದ ಕೃತ್ಯ ನಡೆದಿದೆ. ಕಳ್ಳರ ಚಲನವಲನ ಸಂಪೂರ್ಣ ಶೋರೂಮ್ ನ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



