ಬೆಳಗಾವಿ:– ಬೆಳಗಾವಿಯ ಅಜಮ್ ನಗರದಲ್ಲಿ ಹಾಡಹಗಲೇ ವೃದ್ದೆಯ ಸರ ಕದ್ದು ಖದೀಮರು ಎಸ್ಕೇಪ್ ಆಗಿರುವ ಘಟನೆ ಜರುಗಿದೆ.
Advertisement
ಚಿನ್ನದ ಸರ ಕಳೆದುಕೊಂಡವರನ್ನು ಪದ್ಮಜಾ ಕುಲಕರ್ಣಿ ಎಂದು ಹೇಳಲಾಗಿದೆ. ಕೆಎಲ್ಇ ಆಸ್ಪತ್ರೆ ಹಿಂದುಗಡೆ ವಾಕಿಂಗ್ ಮಾಡುವಾಗ ಬೈಕ್ ಮೇಲೆ ಬಂದ ಖದೀಮರು, ವೃದ್ಧೆಯ 35 ಗ್ರಾಂ ತೂಕದ ಸರ ಕದ್ದು ಎಸ್ಕೇಪ್ ಆಗಿದ್ದಾರೆ.
ಇನ್ನೂ ಚಿನ್ನ ಕಸಿಯುತ್ತಿದ್ದಂತೆ ನೆಲಕ್ಕೆ ಬಿದ್ದ ವೃದ್ದೆಯ ಕತ್ತು ಹಾಗೂ ಕಾಲಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ಗಾರೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.