ಜೈಪುರ್: ರಾಜಸ್ಥಾನದ ದೌಸ್ ಕ್ಷೇತ್ರದ ಕಾಂಗ್ರೆಸ್ ಶಾಸಕ ದೀನ್ ದಯಾಳ್ ಬೈರ್ವಾ ಅವರ ಮನೆಯಲ್ಲಿ ಕಳೆದ 30 ದಿನದಲ್ಲಿ ಮೂರು ಬಾರಿ ಕಳ್ಳತನ ನಡೆದಿದೆ,
Advertisement
ಜೂ.11 ರಂದು ದೌಸಾದಲ್ಲಿ ಮಾಜಿ ಕೇಂದ್ರ ಸಚಿವ ರಾಜೇಶ್ ಪೈಲಟ್ ಅವರ 25 ನೇ ಪುಣ್ಯತಿಥಿಯಂದು ನಡೆದ ಸಭೆಯಲ್ಲಿ ಫೋನ್ ಕಳ್ಳತನವಾಗಿತ್ತು. ಸ್ವಲ್ಪ ದಿನಗಳ ನಂತರ ಅವರ ಮನೆಯಲ್ಲಿ ಬೈಕ್ ಕಳ್ಳತನವಾಗಿತ್ತು. ಇದೀಗ ಟ್ರ್ಯಾಕ್ಟರ್ ಟ್ರಾಲಿ ಕಳ್ಳತನವಾಗಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಶಾಸಕ, ದೌಸಾದಲ್ಲಿರುವ ತಮ್ಮ ನಿವಾಸದಿಂದ ಭಾನುವಾರ ರಾತ್ರಿ ಟ್ರ್ಯಾಕ್ಟರ್ ಟ್ರಾಲಿ ಕಳ್ಳತನವಾಗಿದೆ. ಶಾಸಕರ ಮನೆಯಲ್ಲೇ ಕಳ್ಳರು ಈ ರೀತಿ ಕಳ್ಳತನ ಮಾಡುತ್ತಿದ್ದಾರೆ ಎಂಬುದು ಗಂಭೀರ ವಿಷಯ. ಇದು ಪೊಲೀಸರ ಕೆಲಸಕ್ಕೆ ಹಿಡಿದ ಕನ್ನಡಿಯಾಗಿದೆ. ನಮ್ಮ ಮನೆಯಲ್ಲೇ ಹೀಗಾದ್ರೆ ಸಾಮಾನ್ಯ ಜನರನ್ನು ಪೊಲೀಸರು ಹೇಗೆ ರಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.