ಕಲಬುರಗಿ: ಕಲಬುರಗಿಯಲ್ಲಿ ಹೆಚ್ಚಾದ ಮನೆಗಳ್ಳರ ಹಾವಳಿಯಿಂದ ಜನರು ಆತಂಕದಲ್ಲಿದ್ದಾರೆ. ಹೌದು ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದಲ್ಲಿ ರಾತ್ರಿಯಾದ್ರೆ ಸಾಕು ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ನಿಡಗುಂದಾ ಗ್ರಾಮದ ಹಲವು ಮನೆಗಳು ಕಳ್ಳತನಕ್ಕೆ ಯತ್ನ ಮಾಡಲಾಗಿತ್ತು. ರಾತ್ರಿ ಹೊತ್ತಲ್ಲಿ ಮನೆಯ ಬಾಗಿಲು ತಟ್ಟಿ ಮನೆಯ ಮೇಲ್ಚಾವಣಿ ತೆಗೆಯೋದಕ್ಕೆ ಯತ್ನ ಮಾಡುತ್ತಿದ್ದರು.
ಕಳೆದ ಮೂರ್ನಾಲ್ಕು ದಿನಗಳಿಂದ ಕಳ್ಳರ ಹಾವಳಿಗೆ ಬೆಸತ್ತ ಗ್ರಾಮಸ್ಥರು, ನಿನ್ನೆ ಕೂಡ ಕಳ್ಳತನಕ್ಕೆ ಆಗಮಿಸಿದ್ದ ಕಳ್ಳನನ್ನ ಹಿಡಿದು ಕಟ್ಟಿ ಹಾಕಿದ್ದರು. ಈರಣ್ಣ ಎಂಬಾತನನ್ನ ಹಿಡಿದು ಕಟ್ಟಿ ಹಾಕಿದ್ದು, ಈರಣ್ಣನ ಜೊತೆಗಿದ್ದ ಹಲವರು ಎಸ್ಕೇಪ್ ಆಗಿದ್ದಾರೆ. ಇನ್ನೂ ಗ್ರಾಮಸ್ಥರು ಈರಣ್ಣ ನನ್ನ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಸುಲೇಪೆಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



