ಕಿಲಾಡಿಗಳು, ಬಿಎಂಟಿಸಿ ಟಿಕೆಟ್ ರೋಲ್ ಕದ್ದು ತರಕಾರಿ ಅಂಗಡಿಗೆ ಮಾರಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಯಲಹಂಕದ ಅಟ್ಟೂರು ಲೇಔಟ್ನ ಎಸ್ಆರ್ಎಸ್ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಳಿಗೆಯಲ್ಲಿ ಟಿಕೆಟ್ ರೋಲ್ ಉಪಯೋಗಿಸಿ,
ತರಕಾರಿ ಹಾಗೂ ಹಣ್ಣಿನ ರೇಟ್ ಮುದ್ರಿಸಿ ಕೊಟ್ಟಿದ್ದ. ಈ ಬಗ್ಗೆ ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಬಿಎಂಟಿಸಿಗೆ ಮಾಹಿತಿ ನೀಡಿದ್ದರು. ಬಿಎಂಟಿಸಿ ಅಧಿಕಾರಿಗಳು ಅಂಗಡಿಗೆ ಹೋಗಿ ಪರಿಶೀಲಿಸಿದಾಗ ಎರಡು ಟಿಕೆಟ್ ರೋಲ್ ಪತ್ತೆಯಾಗಿದೆ.ವ್ಯಾಪಾರಿ ಮುರಳಿಕೃಷ್ಣ ಮೇಲೆ ಯಲಹಂಕ ನ್ಯೂ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



