ಆನೇಕಲ್:- ಕಳ್ತನ ಮಾಡೋದಕ್ಕೆ ದೇವಸ್ಥಾನ ಆದ್ರೇ ಏನು? ಮನೆಯಾದರೆ ಏನು? ಕಳ್ತನ ಮಾಡಬೇಕಷ್ಟೇ. ಇಬ್ಬರೂ ಚೋರರು ಕಲ್ಯಾಣ ಮಂಟಪದಲ್ಲಿದ್ದ ನಲ್ಲಿಗಳನ್ನು ಕದ್ದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದ ಕೆಎನ್‌ಟಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಇಲ್ಲಿನ ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿ ಚಂದಾಪುರದಲ್ಲಿರುವ ಕೆಎಂಎಸ್ ಮತ್ತು ಕೆಎನ್ ಟಿ ಕಲ್ಯಾಣ ಮಂಟಪದಲ್ಲಿ ಮುಂಜಾನೆ ಕಳ್ಳರು ಕೈಚಳಕ ತೋರಿಸಿದ್ದಾರೆ.
ಇನ್ನು ಕಲ್ಯಾಣ ಮಂಟಪದ ರೂಂ ಗಳಲ್ಲಿ ಇರುವ ಬೆಲೆ ಬಾಳುವ ಸುಮಾರು 70 ನೀರಿನ ನಲ್ಲಿಗಳು ಹಾಗೂ ಪ್ಯಾಸೆಟ್ಟುಗಳು ಕಳುವು ಮಾಡಿದ್ದಾರೆ ಎಂದು ಕಲ್ಯಾಣ ಮಂಟಪದ ಮಾಲೀಕರಾದ ಟಿ.ಸುಂಕಾರೆಡ್ಡಿ ತಿಳಿಸಿದರು.
ಮೊದಲು ಕೆಎಂಎಸ್ ಕಲ್ಯಾಣ ಮಂದಿರದಲ್ಲಿ ಎಲ್ಲಾ 11 ರೂಮುಗಳಲ್ಲೂ 46 ನಲ್ಲಿಗಳು ಕಳ್ಳತನ ಮಾಡಿ,ನಂತರ ಕೆ ಎನ್ ಟಿ ಕಲ್ಯಾಣ ಮಂದಿರಕ್ಕೆ ಹೋಗಿ ಹ್ಯಾಂಡ್ ವಾಶ್ ಏರಿಯಾದಲ್ಲಿರುವ 33 ನಲ್ಲಿಗಳನ್ನು ಕಳ್ಳತನ ಮಾಡಿದ್ದಾರೆ. ನಂತರ ಗಣೇಶನ ದೇವಸ್ಥಾನ ಪಕ್ಕದಲ್ಲಿರುವ ಮ್ಯಾಗ್ನಾ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನ ಎಸಿ ಕನೆಕ್ಟ್ ಮಾಡುವ ಕಾಪರ್ ಪೈಪ್ ಅನ್ನು ಕಳವು ಮಾಡಿಕೊಂಡು ಸ್ಕೂಟರ್ ನಲ್ಲಿ ಪರಾರಿಯಾಗಿದ್ದಾರೆ.
ಕಲ್ಯಾಣ ಮಂದಿರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳತನದ ಬಗ್ಗೆ ಸೆರೆಯಾಗಿರುತ್ತದೆ.
ಕಳುವಾಗಿರುವ ನಲ್ಲಿಗಳು ಮತ್ತು ಪ್ಯಾಸೆಟ್ ಗಳ ಮೌಲ್ಯ ಸುಮಾರು 60 ಸಾವಿರ ರೂ ಆಗುತ್ತದೆ. ಮಾಲೀಕರಾದ ಸುಂಕಾರೆಡ್ಡಿ ಸೂರ್ಯ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.