ತಿಮ್ಮಪ್ಪನ ಲಡ್ಡು ವಿವಾದ: ಕರ್ನಾಟಕದಲ್ಲಿ ಆಪರೇಷನ್ ಗೀ ಶುರು!

0
Spread the love

ಬೆಂಗಳೂರು:- ತಿರುಪತಿ ಲಡ್ಡು ವಿವಾದ ಬೆನ್ನಲ್ಲೇ ಕರ್ನಾಟಕದಲ್ಲಿ ಆಪರೇಷನ್ ಗೀ ಆರಂಭವಾಗಿದೆ.

Advertisement

ನಿನ್ನೆಯಷ್ಟೇ ವಿವಿಧ ಬಗೆಯ ತುಪ್ಪದ ಗುಣಮಟ್ಟ ಪರೀಕ್ಷೆ ಮಾಡಲು ಆಹಾರ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದರು. ಆದೇಶದ ಬೆನ್ನಲೇ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ.‌

ರಾಜ್ಯಕ್ಕೆ ಎಲ್ಲೆಲ್ಲಿಂದ ತುಪ್ಪಗಳು ಬರುತ್ತಿದೆ, ಹೇಗೆಲ್ಲಾ ಅವುಗಳನ್ನ ಮಾರಾಟ ಮಾಡಲಾಗುತ್ತಿದೆ ಹಾಗೂ ತುಪ್ಪದ ಮಾರಾಟದ ಅಂಗಡಿಗಳ ಮೇಲೆ ಕಣ್ಣಿಟ್ಟಿದೆ. ಈ ಹಿನ್ನೆಲೆ ಇಂದಿನಿಂದ ಆಪರೇಷನ್ ಗೀ, ಶುರುವಾಗಿದೆ.

ಏನಿದು ಆಪರೇಷನ್ ಗೀ?
ಆಹಾರ ಇಲಾಖೆಯಿಂದ ತುಪ್ಪದ ಗುಣಮಟ್ಟ ತಿಳಿಯಲು ಮುಂದು.

ವಯಲವಾರು ಅಧಿಕಾರಿಗಳ ತಂಡ ರಚನೆ.

ದೇವಾಲಯ ಹಾಗೂ ತುಪ್ಪದ ಸಂಗ್ರಹಕ್ಕೆ ಪ್ರತ್ಯೇಕ ತಂಡ ರಚನೆ.

ಅಂಕಿತಾಧಿಕಾರಿ ಸಮ್ಮುಖದಲ್ಲಿ ತುಪ್ಪದ ಸ್ಯಾಂಪಲ್ಸ್ ಸಂಗ್ರಹ.

ರ್ಯಾಂಡಮ್​ನಲ್ಲಿ 250- 300 ತುಪ್ಪದ ಮಾದರಿ ಸಂಗ್ರಹ.

ಹೆಚ್ಚು ಕೊಬ್ಬಿನ ಅಂಶ ಇರುವುದರ ಬಗ್ಗೆ ಪ್ರಯೋಗಾಲಯದಲ್ಲಿ ಎಲ್ಲಾ ತುಪ್ಪದ ಪರೀಕ್ಷೆ.

ಕಲಬೆರಕೆ ಇರುವ ತುಪ್ಪದ ಬ್ರಾಂಡ್‌ ಬ್ಲಾಕ್ ಲಿಸ್ಟ್ ಮಾಡಲು ಮುಂದು.

ಇನ್ನು ಈಗಾಗಲೇ ಅಧಿಕಾರಿಗಳು ಫೀಲ್ಡಿಗಿಳಿದು ತುಪ್ಪದ ಸಂಗ್ರಹಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರ, ಯಲಹಂಕ, ದಾಸರಹಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಇಂದು ಆಹಾರ ಇಲಾಖೆಯ ತಂಡ ವಿವಿಧ ಮಾದರಿಯನ್ನ ಸಂಗ್ರಹಿಸಲಾಗಿದೆ.

ಜೊತೆಗೆ ನಾಳೆಯೂ ಕೂಡ ತುಪ್ಪದ ಮಾದರಿ ಸಂಗ್ರಹ ಮಾಡಲಿದ್ದಾರೆ. ಈ‌ ಹಿಂದೆಯೂ ಒಮ್ಮೆ ಪರೀಕ್ಷೆ ಮಾಡಿದ್ದಾಗ ತುಪ್ಪದಲ್ಲಿ‌ ಹೆಚ್ಚು ಕೊಬ್ಬಿನ‌ ಅಂಶ ಕಂಡು ಬಂದಿತ್ತು. ಇದೀಗ ಮತ್ತೆ ಈ ರೀತಿಯಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here