ರೋಣಕ್ಕೂ ಬಂತು `ಥರ್ಡ್ ಐ’

0
rona
Spread the love

ವಿಜಯಸಾಕ್ಷಿ ಸುದ್ದಿ, ರೋಣ : ವಾಹನ ಸವಾರರು ಇನ್ನುಮುಂದೆ ರೋಣ ಪಟ್ಟಣದಲ್ಲಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಇಲ್ಲದೆ ತಮ್ಮ ವಾಹನಗಳನ್ನು ಚಲಾಯಿಸುವಂತಿಲ್ಲ. ಕಾರಣ, ರೋಣಕ್ಕೂ ಸಹ ಥರ್ಡ್ ಐ ಅಳವಡಿಸಲಾಗಿದ್ದು, ಮಾರ್ಚ್ 1ರಿಂದ ಕಾರ್ಯ ಆರಂಭಿಸಲಿದೆ.

Advertisement

ಈಗಾಗಲೇ ರೋಣ ಪಟ್ಟಣದ ಮುಲ್ಲಾನಭಾವಿ ವೃತ್ತದ ಬಳಿ ಥರ್ಡ್ ಐ ಕ್ಯಾಮರಾವನ್ನು ಅಳವಡಿಸಲಾಗಿದ್ದು, ಪೊಲೀಸ್ ಇಲಾಖೆಯೂ ಸಹ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಿದೆ.

ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುವುದು, ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದು, ಹೆಲ್ಮೆಟ್ ಇಲ್ಲದೆ ಹಾಗೂ ಬೈಕ್‌ಗಳಲ್ಲಿ ಬಿಬ್ಬರಿಗಿಂತ ಹೆಚ್ಚು ಜನ ಪ್ರಯಾಣಿಸುವುದು ಇತ್ಯಾದಿ ಕಾನೂನು ಉಲ್ಲಂಘನೆಗಳ ಬಗ್ಗೆ ಥರ್ಡ್ ಐನಿಂದ ಆಗಿಂದಾಗ್ಗೆ ಮಾಹಿತಿ ಸಂಗ್ರಹವಾಗಲಿದೆ. ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡದಿರುವವರಿಗೆ ಇದೊಂದು ಕಣ್ಗಾವಲು. ಹೀಗಾಗಿ ಸಾರ್ವಜನಿಕರು ನಿಯಮಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು. ಇಲ್ಲದಿದ್ದರೆ ದಂಡ ಕಟ್ಟುವುದು ಅನಿವಾರ್ಯವಾಗುತ್ತದೆ ಎಂದು ಸಿಪಿಐ ಎಸ್.ಎಸ್. ಬಿಳಗಿ ಹಾಗೂ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ಮಾಹಿತಿ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here