`ಥರ್ಡ್ ಐ’ ಸಿಸಿ ಕ್ಯಾಮರಾ ಕಾರ್ಯಾರಂಭ ಇಂದಿನಿಂದ

0
gajendragada
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮಾ.೧ರಿಂದ ಪಟ್ಟಣದಲ್ಲಿ `ಥರ್ಡ್ ಐ’ ಸಿಸಿ ಕ್ಯಾಮರಾ ಕಾರ್ಯಾರಂಭ ಮಾಡಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ರೋಣ ಸಿಪಿಐ ಎಸ್.ಎಸ್. ಬೀಳಗಿ ಹೇಳಿದರು.

Advertisement

ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಗುರುವಾರ ಸಾರ್ವಜನಿಕರಿಗೆ ಸಂಚಾರಿ ನಿಯಮ ಹಾಗೂ ಥರ್ಡ್ ಐ ಸಿಸಿ ಕ್ಯಾಮರಾ ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಸಂಚಾರಿ ನಿಯಮ ಪಾಲನೆಗಾಗಿ ಈಗಾಗಲೇ ಗದಗ ನಗರದಲ್ಲಿ ಥರ್ಡ್ ಐ ಕ್ಯಾಮರಾ ಅಳವಡಿಸಿದ್ದು, ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮಾಲಿಕರ ಮನೆಗಳಿಗೆ ದಂಡದ ನೋಟಿಸ್ ಬರುತ್ತಿವೆ. ಅದರಂತೆ ಗಜೇಂದ್ರಗಡದ ಪ್ರಮುಖ ಸ್ಥಳಗಳಲ್ಲಿ ಥರ್ಡ್ ಐ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಮಾ.1ರಿಂದ ಕಾರ್ಯಾರಂಭ ಮಾಡಲಿವೆ. ಹೀಗಾಗಿ ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಹಾಕಿಕೊಳ್ಳುವುದು ಸೇರಿದಂತೆ ಸಂಚಾರಿ ನಿಯಮಗಳನ್ನು ಪಾಲಿಸುವುದರ ಮೂಲಕ ಸುರಕ್ಷಿತವಾಗಿ ಸಂಚಾರ ಮಾಡಿ, ದಂಡದಿಂದ ತಪ್ಪಿಸಿಕೊಳ್ಳಿ ಎಂದರು.

ಈ ವೇಳೆ ಪೊಲೀಸ್ ಇಲಾಖೆಯ ಉಮೇಶ ಲಮಾಣಿ, ಡಿ.ಎಂ. ಕಟ್ಟಿಮನಿ, ಸಂಗಮೇಶ ಹಲಬಾಗಿಲ, ಶಿವರಾಜ ಮಮಟಗೇರಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here