ಮೈಸೂರು: ಈ ಸರ್ಕಾರ ಒಂದು ಕಡೆ ದರೋಡೆ ಮಾಡಿ, ಮತ್ತೊಂದು ಕಡೆ ಕೊಡುವ ನಾಟಕ ಮಾಡುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಸ್ ಟಿಕೆಟ್ ದರ ಹೆಚ್ಚಳ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಇವರು ಹೆಂಡತಿಗೆ 2 ಸಾವಿರ ಕೊಡಲು, ಮಧ್ಯದ ಮೇಲಿನ ದರ ಹೆಚ್ಚಳ ಮಾಡಿದ್ದಾರೆ ಎಂದರು.
ಶಕ್ತಿ ಯೋಜನೆ ಪರಿಣಾಮವಾಗಿ ಎಲ್ಲಾ ಸಾರಿಗೆ ನಿಗಮಗಳು ಮುಚ್ಚಿಕೊಳ್ಳುವ ಸ್ಥಿತಿಯಲ್ಲಿವೆ. ಈ ಸರ್ಕಾರ ಒಂದು ಕಡೆ ದರೋಡೆ ಮಾಡಿ, ಮತ್ತೊಂದು ಕಡೆ ಕೊಡುವ ನಾಟಕ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮೀಶನ್, ಬಿಟ್ ಕಾಯಿನ್ ಹಗರಣ ಮತ್ತು ಪಿಎಸ್ಐ ನೇಮಕಾತಿ ಅಕ್ರಮ ಅಂತ ಪ್ರತಿದಿನ ಕೂಗಾಡುತ್ತಿದ್ದ ಖರ್ಗೆ,
ಕಳೆದ ಒಂದೂವರೆ ವರ್ಷಗಳಿಂದ ಅವರದ್ದೇ ಸರ್ಕಾರ ಅಧಿಕಾರದಲ್ಲಿದೆ, ಯಾವ ಪ್ರಕರಣವನ್ನಾದರೂ ತನಿಖೆ ಮಾಡಿಸಿದ್ರಾ? ಸಚಿನ್ ಪಾಂಚಾಳ್ ಸಾವಿನ ಪ್ರಕರಣದಲ್ಲಿ ಅವರ ಅಪ್ತ ಕಾರ್ಯದರ್ಶಿಯ ಹೆಸರು ಉಲ್ಲೇಖವಾಗಿದ್ದರೂ ಖರ್ಗೆ ಯಾಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಸಿಂಹ ಪ್ರಶ್ನಿಸಿದರು.