ಚಾಮರಾಜನಗರ:- ನೀರಿನಲ್ಲಿ ಯೋಗ ಮಾಡುತ್ತಲೇ ಯೋಗಪಟು ಓರ್ವರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಜರುಗಿದೆ.
78 ವರ್ಷದ ನಾಗರಾಜ್ ಮೃತ ಯೋಗಪಟು. ತೀರ್ಥ ಸ್ನಾನ ಮಾಡಲೆಂದು ನಾಗರಾಜ್ ಕಾವೇರಿ ನದಿಗೆ ಇಳಿದಿದ್ದರು. ನಾಗರಾಜ್ ನದಿ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ನಾಗರಾಜು ತೇಲುವ ಸ್ಥಿತಿಯಲ್ಲೇ ಇದ್ದರು. ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ನಾಗರಾಜ್ ಮೃತಪಟ್ಟಿದ್ದರು. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೋಗಪಟು ನಾಗರಾಜ್ ಅವರು ಕೊಳ್ಳೇಗಾಲ ಪಟ್ಟಣದ ಲಕ್ಷ್ಮಿ ನಾರಾಯಣ ದೇವಾಲಯದ ಬೀದಿಯಲ್ಲಿ ವಾಸವಾಗಿದ್ದು, ಕಳೆದ 30 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದರು. ನಾಗರಾಜ್ ಅವರು ಕೊಳ್ಳೇಗಾಲ ಪಟ್ಟಣದಲ್ಲಿ ಯೋಗಗುರು ಎಂದೇ ಖ್ಯಾತನಾಮರಾಗಿದ್ದರು.



