“ಇದು ನಿನಗೆ ಕೇವಲ ಆರಂಭ”: ಕನ್ನಡಿಗ ದೀಕ್ಷಿತ್ ಶೆಟ್ಟಿ ಬಗ್ಗೆ ರಶ್ಮಿಕಾ ಮಂದಣ್ಣ ಹೇಳಿದ್ದೇನು?

0
Spread the love

ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಇಂದು, ನವೆಂಬರ್ 7, 2025ರಂದು ಬಿಡುಗಡೆಯಾಗಿದೆ. ಇತ್ತೀಚೆಗೆ ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ರಶ್ಮಿಕಾ, ಈ ಸಿನಿಮಾದ ಮೂಲಕ ತನ್ನ ಮಹಿಳಾ ಪ್ರಧಾನ ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಿದ್ದಾರೆ.

Advertisement

ಚಿತ್ರದ ಬಿಡುಗಡೆ ದಿನದಂದು, ರಶ್ಮಿಕಾ ತಮ್ಮ ಅನುಭವಗಳನ್ನು ಇನ್‌ಸ್ಟಾಗ್ರಾಂ‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಸಹನಟ ದೀಕ್ಷಿತ್ ಶೆಟ್ಟಿ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿ, “ಇದು ನಿನಗೆ ಕೇವಲ ಆರಂಭ. ಆರಂಭದಲ್ಲಿಯೇ ‘ವಿಕ್ರಮ್’ ನಂತಹ ಸವಾಲಿನ ಪಾತ್ರವನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ಹೆಮ್ಮೆಯಾಗುತ್ತಿದೆ. ನಾಳೆ ಏನೇ ಆದರೂ, ನಾವು ಖುಷಿಯಾಗಿರುತ್ತೇವೆ. ನಾವು ಮಾಡಿದ ಕೆಲಸ, ನೀಡಿದ ಸಂದೇಶ ಒಬ್ಬ ವ್ಯಕ್ತಿಯ ಹೃದಯವನ್ನು ಮುಟ್ಟಿದರೂ ನಾವು ಗೆದ್ದಂತೆಯೇ ಅರ್ಥ” ಎಂದು ಹೇಳಿದ್ದಾರೆ. ದೀಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ರಶ್ಮಿಕಾ ಬಾಯ್ಫ್ರೆಂಡ್ ಪಾತ್ರದಲ್ಲಿ ನಟಿಸಿದ್ದಾರೆ.

ನಿರ್ದೇಶಕ ರಾಹುಲ್ ರವೀಂದ್ರನ್ ಕುರಿತು ಮಾತನಾಡುವಾಗ, ರಶ್ಮಿಕಾ ಹೇಳಿದ್ದಾರೆ, “ನೀವು ಪ್ರಪಂಚವನ್ನು ನೋಡುವ ರೀತಿ ಬಹಳ ಭಿನ್ನ. ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ನಿಮ್ಮಂಥ ಜನರು ಜೀವನದಲ್ಲಿ ಹೆಚ್ಚು-ಹೆಚ್ಚು ಸಿಗಬೇಕು” ಎಂದು. ಜೊತೆಗೆ, ಸಹ ನಟಿ ಅನು ಇಮಾನ್ಯುಯೆಲ್ ಬಗ್ಗೆ “ನಮ್ಮ ಜೀವನದಲ್ಲಿಯೂ ದುರ್ಗೆಯರು ಬೇಕು, ನೀವು ನನ್ನ ಪಾಲಿಗೆ ಬಹಳ ವಿಶೇಷ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾದ ಸಹ ನಿರ್ಮಾಪಕರಾದ ದೀಪಾ ಕಪೋನಿಧಿ, ಧೀರಜ್ ಮೋಗಿಲಿನೇನಿ ಹಾಗೂ ಗೀತಾ ಆರ್ಟ್ಸ್ ಮತ್ತು ಅಲ್ಲು ಅರವಿಂದ್ ಅವರಿಗೂ ರಶ್ಮಿಕಾ ಧನ್ಯವಾದ ತಿಳಿಸಿದ್ದಾರೆ. ಚಿತ್ರದಲ್ಲಿ ಅವರು ಅಭಿನಯಿಸಿರುವ ಭೂಮ ಪಾತ್ರವನ್ನು ಅವರು ಬಹಳ ವಿಶೇಷವಾಗಿ ಕಾಣಿಸುತ್ತಾರೆ. ಭೂಮ ಮತ್ತು ರಶ್ಮಿಕಾ ಪಾತ್ರದಲ್ಲಿ ಸಾಕಷ್ಟು ಸಾಮ್ಯತೆ ಇದೆ, ಪಾತ್ರವನ್ನು ಅನುಭವಗಳಿಂದಲೇ ಅರ್ಥಮಾಡಿಕೊಂಡಿದ್ದಾರೆ ಎಂದು ನಟಿ ತಿಳಿಸಿದ್ದಾರೆ. “ಭೂಮಳನ್ನು ಪ್ರೀತಿಸಿ, ಆದರ ತೋರಿ, ರಕ್ಷಿಸಿ” ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ದಿ ಗರ್ಲ್ಫ್ರೆಂಡ್’ ಸಿನಿಮಾದ ಬಿಡುಗಡೆ ದಿನದಂದು ರಶ್ಮಿಕಾ ತನ್ನ ಅಭಿಮಾನಿಗಳಿಗೆ ಭಾರಿ ನಿರೀಕ್ಷೆಯನ್ನು ಮೂಡಿಸಿದ್ದಾರೆ. ಮಹಿಳಾ ಪ್ರಧಾನ ಪಾತ್ರದಲ್ಲಿ ಅವರು ತೋರಿಸಿರುವ ನೈಪುಣ್ಯ ಮತ್ತು ಅಭಿನಯ ಶಕ್ತಿ ಪ್ರೇಕ್ಷಕರ ಗಮನ ಸೆಳೆಯಲಿದೆ ಎಂಬ ನಿರೀಕ್ಷೆ ಇದೆ.

 


Spread the love

LEAVE A REPLY

Please enter your comment!
Please enter your name here