ನವದೆಹಲಿ:- ಇದು ನನ್ನ ಗ್ಯಾರಂಟಿ ಬರೆದಿಟ್ಟುಕೊಳ್ಳಿ. ಮೋದಿ, ಅಮಿತ್ ಶಾ, ಆರ್ಎಸ್ಎಸ್ ಸರ್ಕಾರವನ್ನ ದೇಶದಿಂದ ಖಾಲಿ ಮಾಡಿಸುತ್ತೇವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ʻವೋಟ್ ಚೋರಿʼ ವಿರೋಧಿಸಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಸತ್ಯದ ಬೆನ್ನಿಗೆ ನಿಂತು ಮೋದಿ, ಅಮಿತ್ ಶಾ, ಆರ್ಎಸ್ಎಸ್ ಸರ್ಕಾರವನ್ನ ದೇಶದಿಂದ ಖಾಲಿ ಮಾಡಿಸುತ್ತೇವೆ, ಇದು ನನ್ನ ಗ್ಯಾರಂಟಿ ಎಂದು ಅಬ್ಬರಿಸಿದರು.
ಸತ್ಯ ಅತ್ಯಂತ ಅವಶ್ಯಕ ಎಂದು ಗಾಂಧಿ ಹೇಳುತ್ತಿದ್ದರು. ನಮ್ಮ ಧರ್ಮದಲ್ಲಿ ಸತ್ಯವನ್ನ ಅತ್ಯಂತ ಮುಖ್ಯ ಎಂದು ಭಾವಿಸಲಾಗಿದೆ. ಅದಕ್ಕಾಗಿ ಧರ್ಮದಲ್ಲಿ ʻಸತ್ಯಂ, ಶಿವಂ ಸುಂದರಂʼ ಎಂದು ಉಲ್ಲೇಖಿಸಿದೆ. ಆದರೆ ವಿಶ್ವ ಸತ್ಯ ಅಲ್ಲ ಶಕ್ತಿಯನ್ನು ನೋಡುತ್ತದೆ. ಯಾರ ಬಳಿಕ ಶಕ್ತಿ ಇದೆ ಅವರನ್ನು ಒಪ್ಪಿಕೊಳ್ಳುತ್ತೆ. ಈ ವಿಚಾರಧಾರೆ ಆರ್ಎಸ್ಎಸ್ ಸಿದ್ಧಾಂತ. ಅವರಿಗೆ ಸತ್ಯ ಅಲ್ಲ ಅಧಿಕಾರ ಮುಖ್ಯ. ಈಗ ಅಸತ್ಯ – ಸತ್ಯದ ನಡುವೆ ಹೋರಾಟ ನಡೆಯತ್ತಿದೆ. ನಾವು ಸತ್ಯದ ಹಿಂದೆ ನಿಂತು ಮೋದಿ, ಅಮಿತ್ ಶಾ, ಆರ್ಎಸ್ಎಸ್ ಸರ್ಕಾರವನ್ನ ದೇಶದಿಂದ ಖಾಲಿ ಮಾಡಿಸುತ್ತೇವೆ. ಇದು ನನ್ನ ಗ್ಯಾರಂಟಿ ಎಂದು ಗುಡುಗಿದರು.



