ಬೆಂಗಳೂರು:- “ಬ್ರ್ಯಾಂಡ್ ಬೆಂಗಳೂರು” ಹೆಸರಿನಲ್ಲಿ ಬೆಂಗಳೂರನ್ನು ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿರುವ ಸರ್ಕಾರಕ್ಕೆ ಕನಿಷ್ಠ ರಸ್ತೆ ಗುಂಡಿಯನ್ನು ಮುಚ್ಚಲು ಸಮಯ ಇಲ್ಲದೇ ಇರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಗುಂಡಿಗಳಿಂದ ನಗರದಲ್ಲಿ ಹಲವು ಕಡೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡುವಂತ ಪರಿಸ್ಥಿತಿ ಬಂದಿದೆ.
ಇದೀಗ ರಸ್ತೆ ಗುಂಡಿಗೆ ಇಳಿದ BMTC ಬಸ್ ನಿಂತಲ್ಲೇ ನಿಂತಿದ್ದು, ಸಧ್ಯಈ ವಿಡಿಯೋ ವೈರಲ್ ಆಗುತ್ತಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಂಡಿಗೆ ಸಿಲುಕಿ ನಡುರಸ್ತೆಯಲ್ಲಿ ಬಸ್ ನಿಂತಿದ್ದು, ಇದು ಬೆಂಗಳೂರಿನ ರಸ್ತೆಯ ಅವ್ಯವಸ್ಥೆಗೆ ತಾಜಾ ಉದಾಹರಣೆ ಆಗಿದೆ. ಗುಂಡಿಯಲ್ಲಿ ಸಿಲುಕಿ ಬಸ್ ನ ಮುಂಭಾಗದ ಚಕ್ರ ಹೂತು ಹೋಗಿದೆ. ಅದ್ವಾನವಾದ ರಸ್ತೆಯಲ್ಲಿ ಬಿಎಂಟಿಸಿ ಬಸ್ ಸಿಲುಕಿಕೊಂಡಿದ್ದು, ಗೊಟ್ಟಿಗೆರೆಯ ಹನುಮಾನ್ ದೇವಸ್ಥಾನದ ರಸ್ತೆಯಲ್ಲೇ ಈ ಘಟನೆ ಜರುಗಿದೆ.
ಇನ್ನೂ ವಿಡಿಯೋ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿರುವ ಜನರು, ಇದೇನಾ ಬ್ರ್ಯಾಂಡ್ ಬೆಂಗಳೂರು ಅಂತ ಕಿಡಿಕಾರಿದ್ದಾರೆ.