ಹಾವೇರಿ: ಈ ಫಲಿತಾಂಶ BJPಗೆ ಎಚ್ಚರಿಕೆ ಘಂಟೆ, ನಾವು ಮೂರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಂಕಾಪುರ ಟೋಲ್ ಬಳಿಯ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ಗೆ ಎಚ್ಚರಿಕೆ ಘಂಟೆ ಆಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತಂತೆ ಮಾತನಾಡಿದ ಜಾರಕಿಹೊಳಿ, ಈ ಫಲಿತಾಂಶ ಅವರಿಗೆ ಎಚ್ಚರಿಕೆ ಘಂಟೆ, ನಮಗೆ ಅಲ್ಲ. ನಾವು ಮೂರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.
ಇನ್ನೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಫೀರ್ ಖಾದ್ರಿ ಮನವೊಲಿಕೆ ವಿಫಲವಾದ ವಿಚಾರ ಕುರಿತು ಮಾತನಾಡಿದ ಅವರು, ಈ ವಿಚಾರ ನಮ್ಮ ಗಮನಕ್ಕಂತೂ ಬಂದಿಲ್ಲ. ಅದರ ಬಗ್ಗೆ ಮಾಹಿತಿ ಇಲ್ಲ, ಮನವೊಲಿಕೆ ಮಾಡಲು ಟೀಂ ಬೇರೆ ಇದೆ. ಕಾದು ನೋಡೋಣ, ಇನ್ನೂ ಟೈಂ ಇದೆ ಎಂದು ಹೇಳಿದರು.
ನಾವೂ ವರ್ಕ್ ಮಾಡ್ತಾ ಇದ್ದೇವೆ. ಪಠಾಣ್ ಕೂಡಾ ಪಕ್ಷ ಕಟ್ಟಿದ್ದಾರೆ. ನಮಗೆ ನಮ್ಮದೇ ಪಕ್ಷದ ವೋಟಿದೆ. ಗೆಲ್ಲಲು ಅವಕಾಶ ಇದೆ. ಕಾಂಗ್ರೆಸ್ ನಾಯಕರು ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಗೆಲ್ಲುತ್ತೇವೆ ಅನ್ನೋ ಭರವಸೆ ಇದೆ. ಲಿಂಗಾಯತರೂ ನಮ್ ಕಡೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



