ರಾಜಧಾನಿ ಬೆಂಗಳೂರಿನ ಈ ರಸ್ತೆ ಸಂಚಾರ ನಿರ್ಬಂಧ: ವಾಹನ ಸವಾರರ ಬದಲಿ ಮಾರ್ಗ ಇಲ್ಲಿದೆ!

0
Spread the love

ಬೆಂಗಳೂರು:- ರಾಜಧಾನಿ ಬೆಂಗಳೂರಿನ ರವೀಂದ್ರನಾಥ್ ಕಾಗೂರ್ ವೃತ್ತದಿಂದ ಆರ್.ಟಿ ನಗರ ಮುಖ್ಯರಸ್ತೆಗೆ ಸಂಚಾರವನ್ನು ನಿರ್ಭಂದಿಸಲಾಗಿದೆ.

Advertisement

ಆರ್.ಟಿ ನಗರ ಮುಖ್ಯರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರವನ್ನು ನಿರ್ಭಂದಿಸಲಾಗಿದೆ.

ಮಾರ್ಗ ಬದಲಾವಣೆ ಇಲ್ಲಿದೆ
ಜಯಮಹಲ್ ಮುಖ್ಯ ರಸ್ತೆಯಿಂದ ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯ ರಸ್ತೆಗೆ ಚಲಿಸುವ ಬಿಎಂಟಿಸಿ ಬಸ್ ಗಳು ಸಿ.ಕ್ಯೂ.ಎ.ಎಲ್ ಕ್ರಾಸ್‌ ನಿಂದ ಮೇಟ್ರಿ ಸರ್ಕಲ್‌ನಿಂದ ಬಲ ತಿರುವು ಪಡೆದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಅಂಡರ್‌ಪಾಸ್ ಬಳಿ ಬಲ ತಿರುವು ಪಡೆದುಕೊಂಡು ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದಾಗಿರುತ್ತದೆ.

ಜಯಮಹಲ್ ಮುಖ್ಯರಸ್ತೆಯಿಂದ ಕಾವಲ್ ಬೈರಸಂದ್ರ ಹಾಗೂ ಸುಲ್ತಾನ್ ಪಾಳ್ಯ ಕಡೆಗೆ ಚರಿಸುವ ಬಿಎಂಟಿಸಿ ಬಸ್ ಗಳು ಹಾಗೂ ಇತರೆ ವಾಹನಗಳು ಸಿಕ್ಯೂಎಎಲ್ ಕ್ರಾಸ್ ಬಳಿ ಬಲ ತಿರುವು ಪಡೆದುಕೊಂಡು ವಾಟರ್‌ಬ್ಯಾಂಕ್ ಜಂಕ್ಷನ್ ಕಡೆಯಿಂದ ದೇವೆಗೌಡ ರಸ್ತೆಯ (ಪಿ.ಆರ್.ಟಿ.ಸಿ) ಮುಖಾಂತರ ದಿಣ್ಣೂರು ಜಂಕ್ಷನ್ ಬಳಿ ಬಲ ತಿರುವು ಪಡೆದುಕೊಂಡು ಸುಲ್ತಾನ್ ಪಾಳ್ಯ ಹಾಗೂ ಕಾವಲ್ ಬೈರಸಂದ್ರದ ಕಡೆಗೆ ಚಲಿಸಬಹುದಾಗಿರುತ್ತದೆ.

ವಾಟರ್ ಬ್ಯಾಂಕ್ ಜಂಕ್ಷನ್, ರಾಧಾಕೃಷ್ಣ ಥಿಯೇಟರ್ ಹಾಗೂ ಮಠದಹಳ್ಳಿ ಕಡೆಯಿಂದ ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಚಲಿಸುವ ಇತರೆ ವಾಹನಗಳು ರವೀಂದ್ರನಾಥ್ ಠಾಗೂರ್ ವೃತ್ತದಿಂದ (ಗುಂಡುರಾವ್ ಅಂಕ್ಷನ್) ಬಳಿ ಎಡ ತಿರುವು ಪಡೆದು ತರಳಬಾಳು ರಸ್ತೆ ಮೂಲಕ ಬಳ್ಳಾರಿ ಮುಖ್ಯರಸ್ತೆಗೆ ಬಂದು ಎಡ ತಿರುವು ಪಡೆದುಕೊಂಡು ನಂತರ ಮೇಘ್ರ ಸರ್ಕಲ್ ಬಳಿ ಯು ಟರ್ನ್ ಪಡೆದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಸಿಬಿಐ ಅಂಡರ್‌ಪಾಸ್ ಬಳಿ ಬಲ ತಿರುವು ಪಡೆದುಕೊಂಡು ಆರ್.ಟಿ ನಗರ ಮುಖ್ಯರಸ್ತೆ ಹಾಗೂ ಸಿಬಿಐ ಮುಖ್ಯರಸ್ತೆಗೆ ಸಂಚರಿಸಬಹುದಾಗಿರುತ್ತದೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here