ಡಿ.25ರಂದು ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದರೂ, ಪೈರಸಿ ಸಮಸ್ಯೆ ಮತ್ತೆ ತಲೆದೋರಿದೆ. ಎರಡು ದಿನಗಳಲ್ಲೇ 9 ಸಾವಿರಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ತೆಗೆಸಿರುವುದು ಚಿತ್ರತಂಡಕ್ಕೆ ಶಾಕ್ ನೀಡಿದೆ.
ಈ ಬಗ್ಗೆ ಮಾತನಾಡಿದ ಸುದೀಪ್, “ಟೀಕೆಗಳಿಗೆ ಉತ್ತರ ಕೊಡೋಕೆ ನಾನು ಬಂದಿಲ್ಲ. ಇಂಟಲಿಜೆನ್ಸ್ ಅಂದ್ರೆ ಸಿಲ್ಲಿ ಆಗಿ ಮಾತಾಡೋದಲ್ಲ. ನಮಗೂ ಒಂದು ಇಂಟಲಿಜೆನ್ಸ್ ಇದೆ” ಎಂದು ತಿರುಗೇಟು ನೀಡಿದ್ದಾರೆ.
ಸಿನಿಮಾ ರಕ್ಷಿಸಿಕೊಳ್ಳುವ ಬಗ್ಗೆ ಮಾಹಿತಿ ಬಂದ ತಕ್ಷಣವೇ 48 ಗಂಟೆಗಳ ಮುಂಚೆಯೇ ಪೈರಸಿ ಬಗ್ಗೆ ವಾರ್ನ್ ಮಾಡಿದ್ದೆ ಎಂದು ಹೇಳಿದ ಸುದೀಪ್, ಆ ಮಾತು ತಪ್ಪಾಗಿ ಹರಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿನ ಅನುಭವಗಳಿಂದ ಪಾಠ ಕಲಿತಿರುವ ಚಿತ್ರತಂಡ, ಈ ಬಾರಿ ಪೈರಸಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಕೋಟಿ ಕೋಟಿ ಬಜೆಟ್ ಹಾಕಿ ಮಾಡಿದ ಸಿನಿಮಾಗಳಿಗೆ ಪೈರಸಿ ದೊಡ್ಡ ಅನ್ಯಾಯ ಎಂದು ಸುದೀಪ್ ಮತ್ತೆ ಒತ್ತಿ ಹೇಳಿದ್ದಾರೆ.



